ಕರಾವಳಿತಾಜಾ ಸುದ್ದಿಗಳು
ಉಡುಪಿ : ಇನ್ನೂ ಒಂದು ವಾರ ಕೃಷ್ಣನ ದರ್ಶನಕ್ಕಿಲ್ಲ ಅವಕಾಶ!

ಉಡುಪಿ : ರಾಜ್ಯ ಸರ್ಕಾರ 3.0 ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ದೇವಾಲಯಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಇತರೆ ಸೇವೆಗಳಿಗೆ, ಪ್ರಸಾದ ನೀಡಲು ಅವಕಾಶ ನೀಡಿಲ್ಲ. ಆದರೆ, ಉಡುಪಿ ಕೃಷ್ಣ ಮಠಕ್ಕೆ ಭಕ್ತರಿಗೆ ಅವಕಾಶ ಇಲ್ಲ. ಒಂದು ವಾರದ ಬಳಿಕ ಈ ಬಗ್ಗೆ ತೀರ್ಮಾನ ನಡೆಸಲಾಗುವುದು ಎಂದು ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಹೊರ ರಾಜ್ಯಗಳಿಂದ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.