ಕರಾವಳಿ

ಉಡುಪಿ ಅಂಚೆ ವಿಭಾಗ- ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ

ಉಡುಪಿ: ಸ್ವಚ್ಛತೆಯ ವಿಷಯವಾಗಿ ನಡೆಸುವ ಪ್ರಬಂಧ ಲೇಖನ, ಭಿತ್ತಿ ಚಿತ್ರ ವಿನ್ಯಾಸ ಮುಂತಾದ ಸ್ಪರ್ಧೆಗಳು ಮಕ್ಕಳಲ್ಲಿ ಹಾಗೂ ಯುವಜನರಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಲು ನೆರವಾಗುತ್ತದೆ ಅಲ್ಲದೆ ಇಂತಹ ಸ್ಪರ್ಧೆಗಳಲ್ಲಿ ಮಕ್ಕಳು ತೋರುವ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಆಯೋಜಿಸಿದ ಸ್ಪರ್ಧೆಗಳು ಸಾರ್ಥಕತೆ ಕಂಡುಕೊಳ್ಳುತ್ತವೆ ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್ ಚಂದರ್ ಅಭಿಪ್ರಾಯಪಟ್ಟರು.

ಸ್ವಚ್ಛತಾ ಪಾಕ್ಷಿಕದ ಅಂಗವಾಗಿ ಹದಿನೈದು ದಿನಗಳ‌ ಕಾಲ ಭಾರತೀಯ ಅಂಚೆ ಇಲಾಖೆಯ ಉಡುಪಿ ಅಂಚೆ ವಿಭಾಗದಿಂದ ನಡೆದ ವಿವಿಧ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ ಪ್ರಬಂಧ ಸ್ಪರ್ಧೆ ಹಾಗೂ ಭಿತ್ತಿ ಚಿತ್ರ ವಿನ್ಯಾಸ (ಪೋಸ್ಟರ್) ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

ಶಾಲಾ ಮಕ್ಕಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಹಿರಿಯಡ್ಕ ಗ್ರೀನ್ ಪಾರ್ಕ್ ಶಾಲೆಯ ದೀಪಾ, ದ್ವಿತೀಯ ಬಹುಮಾನ ಪಡೆದ ಬ್ರಹ್ಮಾವರ ಸರಕಾರಿ ಪದವಿಪೂರ್ವ ಕಾಲೇಜಿನ ಅನ್ವಿತಾ ಪಿ, ಹಾಗೂ ಭಿತ್ತಿ ಚಿತ್ರ ವಿನ್ಯಾಸ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ದೀಕ್ಷಿತಾ ಎನ್ ನಾಯಕ್, ಸರಕಾರಿ ಪ್ರೌಢಶಾಲೆ ಸಿದ್ಧಾಪುರ, ದ್ವಿತೀಯ ಬಹುಮಾನ ಪಡೆದ ಸರಕಾರಿ ಪ್ರೌಢಶಾಲೆ, ಸಿದ್ಧಾಪುರ ಇಲ್ಲಿನ ವೈಷ್ಣವಿ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು.

ಕಾಲೇಜು ವಿಭಾಗದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಕುಂದಾಪುರದ ಆರ್ ಎನ್ ಶೆಟ್ಟಿ ಪದವಿಪೂರ್ವ ಕಾಲೇಜಿನ ವಂದ್ಯಾ ಕಾಮತ್, ದ್ವಿತೀಯ ಬಹುಮಾನ ಪಡೆದ ಲಿಟಲ್ರಾಕ್ ಶಾಲೆ ಬ್ರಹ್ಮಾವರ ಇಲ್ಲಿಯ ಪ್ರತೀಕ್ಷಾ ಎಸ್ ಹಾಗೂ ಭಿತ್ತಿ ಚಿತ್ರ ವಿನ್ಯಾಸ ಸ್ಪರ್ಧೆಯಲ್ಲಿ ಮೊದಲ ಬಹುಮಾನ‌ ಪಡೆದ ಪೂರ್ಣಪ್ರಜ್ಞ ಕಾಲೇಜಿನ ಗಗನ್ ಜೆ ಸುವರ್ಣ, ದ್ವಿತೀಯ ಬಹುಮಾನ ಪಡೆದ ಆರ್ ಎನ್ ಶೆಟ್ಟಿ ಕುಂದಾಪುರ ಕಾಲೇಜಿನ ರಕ್ಷದಾ ಗುಡಿಗಾರ್ ಇವರಿಗೆ ಬಹುಮಾನ ವಿತರಿಸಲಾಯಿತು.

ಉಡುಪಿ ಅಂಚೆ ವಿಭಾಗೀಯ ಕಚೇರಿಯಲ್ಲಿ ನಡೆದ ಈ ಸಮಾರಂಭದಲ್ಲಿ ಉಡುಪಿ ಅಂಚೆ ವಿಭಾಗದ ಸಹಾಯಕ ಅಧೀಕ್ಷಕ ಜಯರಾಮ ಶೆಟ್ಟಿ ಧನ್ಯವಾದವಿತ್ತರು. ವಿಭಾಗೀಯ ಕಚೇರಿಯ ಅಂಚೆ ಸಹಾಯಕಿ ಸವಿತಾ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!