ಕರಾವಳಿ
ಮಣಿಪಾಲ್ ಮ್ಯಾರಥಾನ್ 2022 ಪೂರ್ವ ತಯಾರಿ ಸಭೆ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಅಮೆಚೂರ್ ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಸಹಯೋಗದೊಂದಿಗೆ 5ನೇ ಆವೃತ್ತಿಯ “ಮಣಿಪಾಲ್ ಮ್ಯಾರಥಾನ್ 2022” ಫೆಬ್ರವರಿ 13 ಕ್ಕೆ ನಡೆಯಲಿದ್ದು, ಇದರ ಪೂರ್ವ ತಯಾರಿಯ ಬಗ್ಗೆ ಇಂದು ದಿನಾಂಕ 06-12-2021 ರಂದು ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಭಾಗವಹಿಸಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾll. ಎಚ್. ಎಸ್. ಬಲ್ಲಾಳ್, ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ಡಾ. ವಿನೋದ್ ನಾಯಕ್, ಡಾ. ಶೋಭಾ ಕರ್ನಲ್, ಜಯಚಂದ್ರ, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ದಿನೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ನಾರಾಯಣ ದೇವಾಡಿಗ ಉಪಸ್ಥಿತರಿದ್ದರು.