ಪರ್ಯಾಯ ಶ್ರೀ ಅದಮಾರು ಮಠ “ವಿಶ್ವರ್ಪಣಮ್” ಉದ್ಘಾಟನಾ ಸಮಾರಂಭ

ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಅದಮಾರು ಮಠದ “ವಿಶ್ವರ್ಪಣಮ್” ಉದ್ಘಾಟನಾ ಸಮಾರಂಭ ದಿನಾಂಕ 05-12-2021 ರಂದು ಶ್ರೀ ನರಹರಿತೀರ್ಥ ವೇದಿಕೆ, ರಾಜಾಂಗಣದಲ್ಲಿ ನಡೆಯಿತು. ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಭಾಗವಹಿಸಿದರು ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಹಿರಿಯ ಸ್ವಾಮಿಗಳಾದ ಶ್ರೀ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಕಿರಿಯ ಸ್ವಾಮಿಗಳಾದ ಶ್ರೀ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಚಿತ್ರಾಪುರ ಮಠಾಧೀಶರಾದ ಶ್ರೀವಿದ್ಯೇಂದ್ರತೀರ್ಥ ಶ್ರೀಪಾದರು ಆಶೀರ್ವಚಿಸಿದರು. ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ, ಕರ್ನಾಟಕ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿಗಳಾದ ಮಹಾಬಲೇಶ್ವರ ಎಂ.ಎಸ್, ಸಮಾಜ ಚಿಂತಕರಾದ ಎಸ್.ಎನ್.ಸೇತುರಾಂ ಉಪಸ್ಥಿತರಿದ್ದರು. ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ರವರು ಸ್ವಾಗತಿಸಿದರು. ಮಠದ ವಿದ್ವಾಂಸರಾದ ಕುತ್ಪಾಡಿ ಕೃಷ್ಣರಾಜ ಭಟ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ನೀಡಿದರು.