ಕರಾವಳಿ
ಉಡುಪಿ ಜಿಲ್ಲೆಯಲ್ಲಿ ವಾರಾತ್ಯದ ಕರ್ಪ್ಯೂ ರದ್ದು: ಜಿಲ್ಲಾಧಿಕಾರಿ ಕೂರ್ಮಾ ರಾವ್

ಉಡುಪಿ ಸೆಪ್ಟೆಂಬರ್ 10: ರಾಜ್ಯ ಸರಕಾರ ಈಗಾಗಲೇ ವಿಕೇಂಡ್ ಕರ್ಪ್ಯೂವನ್ನು ರಾಜ್ಯಾದ್ಯಂತ ರದ್ದುಪಡಿಸಿದ್ದು, ಇದೀಗ ಉಡುಪಿ ಜಿಲ್ಲಾಡಳಿತವು ಕೂಡ ತಕ್ಷಣ ಜಾರಿಗೆ ಬರುವಂತೆ ವಿಕೇಂಡ್ ಕರ್ಪ್ಯೂವನ್ನು ರದ್ದು ಪಡಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಕೂರ್ಮರಾವ್ ವಾರಂತ್ಯ ಕರ್ಫ್ಯೂ ಬಗ್ಗೆ ಸರಕಾರದಿಂದಲೇ ನಿರ್ದೇಶನ ಬಂದಿದೆ. ಅಲ್ಲದೆ ಜಿಲ್ಲಾಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲು ಕೂಡ ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ತಜ್ಞರ ಸಮಿತಿಯ ಸಭೆಯನ್ನು ಮಾಡಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ವಾರಾಂತ್ಯ ಕರ್ಪ್ಯೂ ಹಿಂಪಡೆಯಲಾಗಿದೆ ಎಂದು ಇವರು ತಿಳಿಸಿದ್ದಾರೆ. ಇನ್ನು ಉಳಿದಂತೆ ಎಲ್ಲಾ ನಿರ್ಬಂಧಗಳು ಹಿಂದಿನಂತೆಯೇ ಮುಂದುವರೆಯುತ್ತದೆ.
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೂಡ ಕೊರೋನಾ ಲಸಿಕೆ ಪಡೆಯಿರಿ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಸೂಚನೆ ನೀಡಿದರು.