ಕರಾವಳಿ
ಖ್ಯಾತ ನಟ ಕಿಚ್ಚ ಸುದೀಪ್ ಕುದ್ರೋಳಿ ದೇಗುಲಕ್ಕೆ ಭೇಟಿ: ವಿಶೇಷ ಪೂಜೆ ಸಲ್ಲಿಕೆ

ಮಂಗಳೂರು : ಕನ್ನಡದ ಖ್ಯಾತ ನಟ ಸುದೀಪ್ ಇಂದು ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಕನ್ನಡದ ಕಿಚ್ಚ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಸುದೀಪ್ ಅವರು ಇಂದು ಸಂಜೆ ದೇಗುಲಕ್ಕೆ ಆಗಮಿಸಿದರು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎಚ್. ಎನ್. ಸಾಯಿರಾಂ, ಟ್ರಸ್ಟಿ ಶೇಖರ ಪೂಜಾರಿ, ಮೆನೇಜರ್ ವಿನೀತ್ ಮುಂತಾದವರು ಸುದೀಪ್ ಅವರನ್ನು ಸ್ವಾಗತಿಸಿ, ದೇವಾಲಯಕ್ಕೆ ಬರ ಮಾಡಿಕೊಂಡರು. ಚಲನ ಚಿತ್ರ ನಿರ್ದೇಶಕ ರಾಜೇಶ್ ಭಟ್ ಉಪಸ್ಥಿತರಿದ್ದರು.