ಕರಾವಳಿ
ಮಲ್ಪೆ:-ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಉಡುಪಿ: ಮಲ್ಪೆಯಲ್ಲಿ ಒಂಬತ್ತು ದಿನದ ಹಿಂದೆ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟು ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದರು. ಇದೀಗ ಅಕ್ಟೋಬರ್ 27ರಂದು ಬಾರ್ಕೂರಿನ ಕಂಬಳ ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮತೃರನ್ನು ನೇಜಾರು ನಿಡಂಬಳ್ಳಿ ನಿವಾಸಿ ಪ್ರವೀಣ್ ಬೆಳ್ಚಡ ಎಂದು ಗುರುತಿಸಲಾಗಿದೆ.ಪ್ರವೀಣ್ ಅಕ್ಟೋಬರ್ 18 ರಂದು ಮನೆ ಬಿಟ್ಟು ತೆರಳಿದ್ದು ಬಳಿಕ ಹಿಂತಿರುಗಲಿಲ್ಲ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ನಾಪತ್ತೆಯಾದ ಎರಡು ದಿನಗಳ ನಂತರ ಅವರ ವಾಹನ ಬಾರ್ಕೂರು ಸೇತುವೆ ಬಳಿ ಪತ್ತೆಯಾಗಿತ್ತು