ಕರಾವಳಿ
ವಿಧಾನ ಪರಿಷತ್ ಚುನಾವಣೆ: ದ.ಕ ಜಿಲ್ಲೆಯಲ್ಲಿ ಬಿಜೆಪಿಯ ಕೋಟಾ, ಕಾಂಗ್ರೆಸ್ ನ ಭಂಡಾರಿಗೆ ಜಯ

ಮಂಗಳೂರು: ವಿಧಾನ ಪರಿಷತ್ ನ ದ್ವಿ ಸದಸ್ಯತ್ವ ಸ್ಥಾನಕ್ಕೆ ಡಿ .10 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ನಿಂದ ಮಂಜುನಾಥ ಭಂಡಾರಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ನಿಂದ ಮಂಜುನಾಥ ಭಂಡಾರಿ, ಎಸ್ಡಿಪಿಐನಿಂದ ಶಾಫಿ ಬೆಳ್ಳಾರೆ ಸ್ಪರ್ಧಿಸಿದ್ದರು.
ಪ್ರಥಮ ಪ್ರಶಸ್ತ್ಯದ ಮತಗಳಲ್ಲಿ ಎರಡು ಪಕ್ಷಗಳಿಗೆ ಜಯ ಲಭಿಸಿದೆ. ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿಗೆ 3,672 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿಗೆ 2,079 ಮತಗಳು ಹಾಗೂ ಎಸ್ ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆ ಅವರಿಗೆ 204 ಮತಗಳು ಲಭಿಸಿವೆ. ಒಟ್ಟು ಚಲಾವಣೆ ಮತ 6,011 ಯಾಗಿದೆ, 5,955 ಮತ ಸಿಂಧು ಆಗಿದ್ದು, 56 ಮತ ಅಸಿಂಧು ಆಗಿವೆ.