ರಾಷ್ಟ್ರೀಯ
ಒಂದು ಕಿಲೋ ಚಹಾ ಪುಡಿಗೆ ಒಂದು ಲಕ್ಷ ರೂಪಾಯಿ!

ಗುವಾಹಟಿ: ದೇಶದಲ್ಲಿ ಹಲವು ವಿಧದ ಚಹಾ ಪುಡಿ ದೊರೆಯುತ್ತಿವೆ. ಇವುಗಳಲ್ಲಿ ಕೆಲವು ಅಪರೂಪದಲ್ಲಿ ಅಪರೂಪ. ಇಂತಹ ಒಂದು ತಳಿಯ ಟೀ ಪುಡಿ ಕಿಲೋ ಒಂದಕ್ಕೆ ಒಂದು ಲಕ್ಷ ರೂಪಾಯಿಗೆ ಹರಾಜಾಗಿದೆ.
ಗುವಾಹಟಿಯಲ್ಲಿ ನಡೆದ ಚಹಾ ಹರಾಜು ಕೇಂದ್ರದಲ್ಲಿ ಅಸ್ಸಾಂನ ಅಪರೂಪದ ಮನೋಹರಿ ಗೋಲ್ಡ್ ಟೀ ಪುಡಿ ದುಬಾರಿ ಹಣಕ್ಕೆ ಸೇಲ್ ಆಗಿದೆ.
ದೇಶದ ಅತೀ ಶ್ರೀಮಂತರು ಮಾತ್ರ ಈ ಚಹಾದ ಟೇಸ್ಟ್ ಮಾಡಲು ಸಾಧ್ಯ. ಉಳಿದವರಿಗೆ ಚಿತ್ರದಲ್ಲಿ ನೋಡಿ ಕಣ್ತುಂಬಿಕೊಳ್ಳುವ ಅವಕಾಶ.