ಅಂತಾರಾಷ್ಟ್ರೀಯ
ಕೊರೋನಾ ಲಸಿಕೆ ಪಡೆಯದಿದ್ದರೆ ಕೆಲಸದಿಂದ ವಜಾ: ಗೂಗಲ್ ಎಚ್ಚರಿಕೆ

ವಾಷಿಂಗ್ಟನ್: ಕೊರೋನಾ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಲು ವಿಫಲವಾಗಿರುವ ಸಂಸ್ಥೆಯ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಗೂಗಲ್ ಸಂಸ್ಥೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಕೊರೋನಾ ಲಸಿಕೆ ಹಾಕಿಸಿಕೊಳ್ಳುವುದು ಸೇರಿದಂತೆ ಕೊರೋನಾ ಮಾರ್ಗಸೂಚಿ ಕ್ರಮಗಳನ್ನು ತೆಗೆದುಕೊಂಡ ಬಗ್ಗೆ ಡಿಸೆಂಬರ್ 3ರೊಳಗೆ ಮಾಹಿತಿ ನೀಡಬೇಕು ಎಂದು ಸಿಬ್ಬಂದಿಗೆ ಸೂಚಿಸಲಾಗಿತ್ತು.
ಇದನ್ನು ಪಾಲಿಸಲು ವಿಫಲರಾದ ಸಿಬ್ಬಂದಿ ವಿರುದ್ದ ವೇತನ ತಡೆ ಮತ್ತು ಕೆಲಸದಿಂದ ವಜಾ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲು ಗೂಗಲ್ ಚಿಂತನೆ ನಡೆಸಿದೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಈ ಬೆಳವಣಿಗೆ ಸಂಬಂಧ ಗೂಗಲ್ ಅಧಿಕೃತ ಹೇಳಿಕೆ ಬಿಡುಗಡೆಮಾಡಿಲ್ಲ.