ಆಧಾರ್- ವೋಟರ್ ಐಡಿ ಲಿಂಕ್ ಮಾಡುವುದು ಹೇಗೆ?

ಆಧಾರ್ ಕಾರ್ಡ್ಗೆ ಮತದಾರರ ಗುರುತು ಚೀಟಿ (ವೋಟರ್ ಐಡಿ) ಜೋಡಿಸುವ ಮಹತ್ವದ ಚುನಾವಣೆ ಸುಧಾರಣಾ ಮಸೂದೆಯೊಂದಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಮೂಲಕ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ.
ಲಿಂಕ್ ಮಾಡುವುದು ಕಡ್ಡಾಯವಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಲಿಂಕ್ ಮಾಡುವುದು ಹೇಗೆ?
https://voterportal.eci.gov.in ಭೇಟಿ ನೀಡಿ.
ಮೊಬೈಲ್ ನಂಬರ್/ಇಮೇಲ್ ಐಡಿ/ವೋಟರ್ ಐಡಿ ಸಂಖ್ಯೆ ನೀಡಿ ಲಾಗಿನ್ ಆಗಿ. ಪಾಸ್ವರ್ಡ್ ನಮೂದಿಸಿ.
ರಾಜ್ಯ, ಜಿಲ್ಲೆ, ವೈಯಕ್ತಿಕ ವಿವರಗಳಾದ ಹೆಸರು, ಜನ್ಮ ದಿನಾಂಕ ಮತ್ತು ತಂದೆ ಹೆಸರು ನಮೂದಿಸಿ.
ಈ ವಿವರಗಳ ನಮೂದು ನಂತರ ಸರ್ಚ್ ಬಟನ್ ಒತ್ತಿ.
‘ಫೀಡ್ ಆಧಾರ್ ನಂಬರ್’ ಕ್ಲಿಕ್ ಮಾಡಿ.
ಸ್ಕ್ರೀನ್ ಮೇಲೆ ಬರುವ ಪಾಪ್ ಅಪ್ ಪೇಜ್ನಲ್ಲಿ ಆಧಾರ್ ಕಾರ್ಡ್, ಆಧಾರ್ ಸಂಖ್ಯೆ, ವೋಟರ್ ಐಡಿ ಸಂಖ್ಯೆ, ನೋಂದಾಯಿತ ಮೊಬೈಲ್/ಇಮೇಲ್ ವಿಳಾಸ ತುಂಬಿ.
ಮರುಪರಿಶೀಲನೆ ಮಾಡಿ ‘ಸಬ್ವಿುಟ್’ ಬಟನ್ ಒತ್ತಿ.
ನಿಮ್ಮ ಅರ್ಜಿ ಯಶಸ್ವಿಯಾಗಿ ನೋಂದಾವಣೆಗೊಂಡಿದೆ ಎಂಬ ಸಂದೇಶ ಬರುತ್ತದೆ