ರಾಜ್ಯ
ವೆಲ್ಲೂರು: ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಹೊಸಗದ್ದೆ ಪ್ರಭಾ ಪೊಲೀಸರಿಗೆ ಶರಣಾಗತಿ

ವೆಲ್ಲೂರು : ನಕ್ಸಲ್ ಚಟುವಟಿಕೆಗಳ ಮೂಲಕ ಪಶ್ಚಿಮಘಟ್ಟಗಳ ಗುರುತಿಸಿಕೊಂಡಿದ್ದ ಹೊಸಗದ್ದೆ ಪ್ರಭಾ ಇಂದು ತಮಿಳುನಾಡಿನ ವೆಲ್ಲೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.
ಪ್ರಭಾ ಅಲಿಯಾಸ್ ಹೊಸಗದ್ದೆ ಪ್ರಭಾ ಅಲಿಯಾಸ್ ಸಂಧ್ಯಾ ಅಲಿಯಾಸ್ ವಿಂಧು ಅಲಿಯಾಸ್ ನೇತ್ರಾ ಅಲಿಯಾಸ್ ಮಧು ಮುಂತಾದ ಹೆಸರುಗಳಿಂದ ಪ್ರಭಾ ಅವರನ್ನು ಕರೆಯಲಾಗುತ್ತಿತ್ತು.
2010 ರಲ್ಲಿ ಹೊಸಗದ್ದೆ ಪ್ರಭಾ ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿದ್ದರೂ ಅದು ದೃಢಪಟ್ಟಿರಲಿಲ್ಲ.ರಾಜ್ಯ ಸರ್ಕಾರ ಹೊಸಗದ್ದೆ ಪ್ರಭ ಪತ್ತೆ ಗಾಗಿ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.