ಕರಾವಳಿ
ಮಂಗಳೂರು: ಮೀನುಗಾರನಿಗೆ ಹಿಂಸೆ ಪ್ರಕರಣ : 6 ಜನರ ಬಂಧನ

ಮಂಗಳೂರು (ದ.ಕ.): ಮೊಬೈಲ್ ಕದ್ದಿದ್ದಾನೆ ಎಂದು ಆರೋಪಿಸಿ ಮೀನುಗಾರನೊಬ್ಬನನ್ನು ಇತರ ಮೀನುಗಾರರು ತಲೆ ಕೆಳಗೆ ಮಾಡಿ ಕಾಲು ಕಟ್ಟಿ ತೂಗು ಹಾಕಿ ಹಿಂಸಿಸಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.
ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿ ಆಂಧ್ರ ಪ್ರದೇಶ ಮೂಲದವನು ಎಂದು ಗುರುತಿಸಲಾಗಿದೆ.
ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ಈ ಮಂಗಳೂರು ನಗರದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರೆಲ್ಲರೂ ಆಂಧ್ರಪ್ರದೇಶ ಮೂಲದ ಮೀನುಗಾರರು ಎಂದು ತಿಳಿದು ಬಂದಿದೆ.
ಬಂಧಿತರನ್ನು ಕೊಂಡೂರು ಪೋಲಯ್ಯ (23), ಅವುಲ ರಾಜ್ ಕುಮಾರ್ (26), ಕಾಟಂಗರಿ ಮನೋಹರ್ (21), ವುಟುಕೋರಿ ಜಾಲಯ್ಯ (30), ಕರ್ಪಿಂಗಾರಿ ರವಿ (27) ಮತ್ತು ಪ್ರಳಯ ಕಾವೇರಿ ಗೋವಿಂದಯ್ಯ (47) ಎಂದು ಗುರುತಿಸಲಾಗಿದೆ.