ಅಂತಾರಾಷ್ಟ್ರೀಯ

ಗೂಗಲ್ ಗೆ 750 ಕೋಟಿ ರೂಪಾಯಿ ದಂಡ ವಿಧಿಸಿದ ನ್ಯಾಯಾಲಯ

ಮಾಸ್ಕೊ: ವಿಶ್ವ ಪ್ರಸಿದ್ಧ ಗೂಗಲ್ ಸಂಸ್ಥೆಗೆ ರಷ್ಯಾದ ಸ್ಥಳೀಯ ನ್ಯಾಯಾಲಯವೊಂದು 750 ಕೋಟಿ ರೂಪಾಯಿ ದಂಡ ವಿಧಿಸಿದೆ.

ನ್ಯಾಯಾಲಯದ ಎಚ್ಚರಿಕೆಯ ಹೊರತಾಗಿಯೂ ಆಕ್ಷೇಪಾರ್ಹ ಅಂಶಗಳನ್ನು ತೆಗೆದುಹಾಕಲು ಗೂಗಲ್ ವಿಫಲವಾಗಿರುವ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ.

ಮಾಸ್ಕೋದ ಟ್ಯಾಗನ್ಸ್ಕಿ ನ್ಯಾಯಾಲಯ ಈ ತೀರ್ಪು ನೀಡಿದೆ. ಇದರ ಜತೆಗೆ ಫೇಸ್ ಬುಕ್ ನ ಮಾತೃ ಸಂಸ್ಥೆ ಮೆಟಾಗೆ ನ್ಯಾಯಾಲಯ 175 ಕೋಟಿ ರೂಪಾಯಿ ದಂಡ ವಿಧಿಸಿದೆ.

ಮಾಸ್ಕೊದ ನ್ಯಾಯಾಲಯ ದಂಡ ಹೇರಿದರೂ ಇದು ಸಂಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!