ಕರಾವಳಿ
ಹೆಸರು ದುರ್ಬಳಕೆ – ಉಡುಪಿ ನಗರಸಭೆಯ ಅಧಿಕಾರಿ ವಿರುದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಜಿಲ್ಲಾಧಿಕಾರಿಗೆ ದೂರು

ಉಡುಪಿ: ಕಾಮಗಾರಿ ವಿಳಂಬಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡಲು ತನ್ನ ಹೆಸರನ್ನು ದುರ್ಬಳಕೆ ಮಾಡಿರುವ ನಗರಸಭೆಯಲ್ಲಿ ಅಭಿಯಂತರರಾಗಿರುವ ದಿವಾಕರ್ ಎಂಬವರ ವಿರುದ್ಧ ಶೀಘ್ರವಾಗಿ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಕೂರ್ಮ ರಾವ್ ಅವರಿಗೆ ಲಿಖಿತ ರೂಪದಲ್ಲಿ ಮಾಹಿತಿ (ಸೂಚನೆ) ನೀಡಿದ್ದು, ನಗರಸಭೆಯಲ್ಲಿ ಅಭಿಯಂತರರಾಗಿರುವ ದಿವಾಕರ್ ಎಂಬುವವರು ಕಾಮಗಾರಿ ವಿಳಂಬಕ್ಕೆ ಹಾಗೂ ಇತರ ಸಂಬಂಧಿತ ವಿಚಾರಕ್ಕಾಗಿ ಸಾರ್ವಜನಿಕರಿಗೆ ತೊಂದರೆ ಕೂಡಲು ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಅದುದರಿಂದ ಈ ವಿಚಾರವನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಶೀಘ್ರವಾಗಿ ಶಿಸ್ತು ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ.