ಜ. 3 ರಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ: ಪ್ರಧಾನಿ
ನವದೆಹಲಿ: ನೂತನ ಕ್ಯಾಲೆಂಡರ್ ವರ್ಷದ ಜನವರಿ 3 ರಿಂದ ದೇಶಾದ್ಯಂತ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಹೇಳಿದರು.
ಇಂದು ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಓಮಿಕ್ರಾನ್ ರೂಪಾಂತರವು ಕೋವಿಡ್ ಸೋಂಕನ್ನು ವೇಗವಾಗಿ ಹೆಚ್ಚಿಸುತ್ತಿರುವುದರಿಂದ ಎಚ್ಚರಿಕೆಯಿಂದಿರಬೇಕಾದ ಸಮಯ ಬಂದಿದೆ.
ಸೋಂಕನ್ನು ನಿಯಂತ್ರಿಸುವ ದೃಷ್ಟಿಯಿಂದ ಬಹಳ ಎಚ್ಚರಿಕೆಯಿಂದ ಹೆಜ್ಜೆಯನ್ನಿಡಬೇಕು. ಮಾಸ್ಕ್, ಕೈಗಳ ಸ್ವಚ್ಛತೆ, ಅನಗತ್ಯ ಗುಂಪು ಸೇರದಿರುವುದು ಇವುಗಳ ಬಗ್ಗೆ ಅರಿವು ಅಗತ್ಯ. ಜನರು ಭಯಭೀತರಾಗದೆ ಜಾಗರೂಕರಾಗಿರಿ ಎಂದು ಅವರು ಮನವಿ ಮಾಡಿದರು.
ಕೋವಿಡ್ ನಮ್ಮಿಂದ ದೂರವಾಗಿಲ್ಲ. ಎಲ್ಲರೂ ಒಗ್ಗಟ್ಟಿನ ಪ್ರಯತ್ನವನ್ನು ಮಾಡುವ ಕಾಲ ಸನ್ನಿಹಿತವಾಗಿದೆ. ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ ವೈದ್ಯರ ಸಲಹೆಯ ಮೇರೆಗೆ ಪ್ರಿಕಾಶನ್ ಡೋಸ್ ನೀಡಲಾಗುವುದು. ಜನವರಿ 10 ರಿಂದ ಬೂಸ್ಟರ್ ಡೋಸ್ ನೀಡಲು ನಿರ್ಧರಿಸಲಾಗಿದೆ ಎಂದರು.
ದೇಶಾದ್ಯಂತ 1,40,000 ಐಸಿಯು ಬೆಡ್ ಗಳಿವೆ, 4 ಲಕ್ಷ ಆಕ್ಸಿಜನ್ ಕಾನ್ಸನ್ಟ್ರೇಟರ್ ನೀಡಲಾಗಿದೆ. 3000 ಆಕ್ಸಿಜನ್ ಘಟಗಳಿವೆ, 90,000 ಐಸಿಯು, ನಾನ್ ಐಸಿಯು ಬೆಡ್ ಗಳಿವೆ. ಲಸಿಕಾಕರಣ ಕೂಡ ಉತ್ತಮ ರೀತಿಯಲ್ಲಿ ಸಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.