ರಾಷ್ಟ್ರೀಯ
ಜನವರಿ 1 ರಿಂದ 15 ವರ್ಷದಿಂದ 18ರ ತನಕದ ಮಕ್ಕಳಿಗೆ ಲಸಿಕೆ ನೋಂದಾವಣೆ ಆರಂಭ

ನವದೆಹಲಿ: 15ರಿಂದ 18 ವರ್ಷದ ಮಕ್ಕಳಿಗೆ ಕೊರೋನಾ ತಡೆ ಲಸಿಕೆ ನೀಡುವ ಸಂಬಂಧ ನೋಂದಾವಣೆ ಪ್ರಕ್ರಿಯೆ ಜನವರಿ ಒಂದರಿಂದ ಆರಂಭವಾಗಲಿದೆ. ಕೋವಿನ್ ಆ್ಯಪ್ ನಲ್ಲಿ ನೋಂದಾಯಿಸಬೇಕಾಗಿದೆ.
ಮಕ್ಕಳಿಗೆ ಕೊರೋನಾ ತಡೆ ಲಸಿಕೆ ನೀಡುವ ಸಂಬಂಧ ಈ ಆ್ಯಪ್ ನಲ್ಲಿ ಹೆಚ್ಚುವರಿ ಫೀಚರ್ ಗಳನ್ನು ಅಳವಡಿಸಲಾಗಿದೆ. ಶಾಲೆಯ ಗುರುತು ಚೀಟಿ ಮಾಹಿತಿ ಅಪ್ಲೋಡ್ ಮಾಡಬಹುದಾಗಿದೆ.
ಕೋವಿನ್ ಪ್ಲಾಟ್ ಫೋರಂ ಮುಖ್ಯಸ್ಥ ಡಾ. ಆರ್ ಎಸ್ ಶರ್ಮಾ ಈ ಮಾಹಿತಿ ನೀಡಿದ್ದಾರೆ. ಮಕ್ಕಳ ಬಳಿ ಆಧಾರ ಕಾರ್ಡ್ ಸೇರಿದಂತೆ ಇತರ ಕಾರ್ಡ್ ಗಳು ಇರದ ಕಾರಣ ಶಾಲೆಯ ಗುರುತು ಚೀಟಿ ಪರಿಗಣಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ