ರಾಷ್ಟ್ರೀಯ
ಜನವರಿ 31ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತ

ನವದೆಹಲಿ: ಭಾರತಲ್ಲಿ ಮುಂದಿನ ವರ್ಷದ ಜನವರಿ 31ರವರೆಗೆ ನಿಗದಿತ ಅಂತರಾಷ್ಟ್ರೀಯ ವಿಮಾನಗಳ ಹಾರಾಟ ಸ್ಥಗಿತಗೊಳ್ಳಲಿದೆ ಎಂದು ವಾಯುಯಾನ ನಿಯಂತ್ರಕ ಡಿಜಿಸಿಎ ತಿಳಿಸಿದೆ.
ಕೊರೋನಾ ರೂಪಾಂತರಿ ಒಮೈಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈ ಆದೇಶ ಹೊರಡಿಸಿದೆ.
ಭಾರತಕ್ಕೆ ಮತ್ತು ಭಾರತದಿಂದ 2022ರ ಜನವರಿ 31ರ 23:59 ಗಂಟೆಗಳವರೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನ ಸೇವೆಗಳ ಮೇಲಿನ ನಿರ್ಬಂಧವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಡಿಜಿಸಿಎ ತಿಳಿಸಿದೆ