ರಾಷ್ಟ್ರೀಯ
ಟಾಲಿವುಡ್ ನಟ ರಮೇಶ್ ಬಾಬು ನಿಧನ

ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಸಹೋದರ, ನಟ ರಮೇಶ್ ಬಾಬು ನಿಧನರಾಗಿದ್ದಾರೆ.
ಹಲವು ವಷಗಳಿಂದ ಯಕೃತ್ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ಯಕೃತ್ ಸೋಂಕು ತೀವ್ರವಾದ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅಸುನೀಗಿದ್ದಾರೆ.
ರಮೇಶ್ ಬಾಬು 1974ರಲ್ಲಿ ಟಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಸುಮಾರು 15ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿ, ಹಲವು ಚಿತ್ರ ನಿರ್ಮಿಸಿದ್ದರು.