ಕರಾವಳಿ
ಪೌರ ಸನ್ಮಾನ ಹಾಗೂ ಸಭಾ ಕಾರ್ಯಕ್ರಮಕ್ಕೆ ಪರ್ಯಾಯ ಅದಮಾರು ಮಠದ ಶ್ರೀ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ ಶಾಸಕ ರಘುಪತಿ ಭಟ್ ಆಹ್ವಾನ

ಉಡುಪಿ ನಗರ ಸಭೆ ಮತ್ತು ಪರ್ಯಾಯ ಮಹೋತ್ಸವ ಸಮಿತಿಯಿಂದ ನಾಳೆ ದಿನಾಂಕ 10-01-2022 ರಂದು ನಡೆಯಲಿರುವ “ಪೌರ ಸನ್ಮಾನ ಹಾಗೂ ಸಭಾ ಕಾರ್ಯಕ್ರಮ”ಕ್ಕೆ ಪರ್ಯಾಯ ಅದಮಾರು ಮಠದ ಶ್ರೀ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರನ್ನು ಇಂದು ದಿನಾಂಕ 09-01-2022 ರಂದು ಪರ್ಯಾಯೋತ್ಸವ ಸಮಿತಿಯೊಂದಿಗೆ ಪರ್ಯಾಯೋತ್ಸವ ಸಮಿತಿ ಗೌರವ ಕಾರ್ಯಾಧ್ಯಕ್ಷರಾದ ಶ್ರೀ ಕೆ. ರಘುಪತಿ ಭಟ್ ರವರು ಭೇಟಿಯಾಗಿ ಆಹ್ವಾನಿಸಿ ಪರ್ಯಾಯದ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಪರ್ಯಾಯೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.