ಅಂತಾರಾಷ್ಟ್ರೀಯ
ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಅಪಹರಣ, ಹತ್ಯೆ ಬೆದರಿಕೆ: ಆರೋಪಿ ಬಂಧನ..!

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಪಹರಿಸಿ ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ವೃದ್ದನೊಬ್ಬನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಥೋಮಸ್ ವೆಲ್ಸಿಂಕಿ ಎಂದು ಗುರುತಿಸಲಾಗಿದೆ. 2020ರಲ್ಲಿ ನಡೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಟ್ರಂಪ್ ಪದತ್ಯಾಗ ಮಾಡದಿದ್ದರೆ ಅವರನ್ನು ಹತ್ಯೆ ಮಾಡುವುದಾಗಿ ವೆಲ್ಸಿಂಕಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.
ಅಮೆರಿಕದ ರಹಸ್ಯ ಪೊಲೀಸ್ ದಳ ವಿಭಾಗಕ್ಕೆ ಈ ಸಂಬಂಧ ಇ ಮೇಲ್ ಮೂಲಕ ಬೆದರಿಕೆ ಸಂದೇಶ ಕೂಡ ಕಳುಹಿಸಿದ್ದ ಎಂದು ಆರೋಪಿಸಲಾಗಿದೆ.
ಅಮೆರಿಕದ ಸಿಕ್ರೇಟ್ ಸರ್ವಿಸ್ ವಿಭಾಗಕ್ಕೆ ಸೇರಿದ ಅಧಿಕಾರಿಗಳು ಇದೀಗ 72 ವರ್ಷ ಪ್ರಾಯದ ವೆಲ್ಸಿಂಕಿಯನ್ನು ಬಂಧಿಸಿದ್ದಾರೆ.