ಕರಾವಳಿ
ಕಾರ್ಕಳ : ಕೋವಿಡ್ ಹಿನ್ನಲೆ ; ಅತ್ತೂರು ಜಾತ್ರೆ ಮುಂದೂಡಿಕೆ

ಕಾರ್ಕಳ : ಜ. 16ರಿಂದ 27ರವರೆಗೆ ನಿಗದಿಯಾಗಿದ್ದ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮಹೋತ್ಸವವನ್ನು ಮುಂದೂಡಲಾಗಿದೆ ಎಂದು ಬಸಿಲಿಕಾ ನಿರ್ದೇಶಕ ಅಲ್ಬನ್ ಡಿಸೋಜಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಮುಂದೂಡಲ್ಪಟ್ಟ ವಾರ್ಷಿಕ ಮಹೋತ್ಸದ ದಿನಗಳನ್ನು ಸೂಕ್ತ ಸಮಯದಲ್ಲಿ ಭಕ್ತಾದಿಗಳಿಗೆ ತಿಳಿಸಲಾಗುವುದು, ಭಕ್ತಾದಿಗಳು ಮತ್ತು ಸಾರ್ವಜನಿಕರು ಸಹಕರಿಸಬೇಕಾಗಿ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ