ಕರಾವಳಿ
ಮೀನುಗಾರಿಕೆ ಬೋಟ್ ನಿಂದ ಸಮುದ್ರಕ್ಕೆ ಬಿದ್ದು ಮೃತಪಟ್ಟ ದಿ. ವಿಶ್ವನಾಥ್ ಅವರ ಕುಟುಂಬಕ್ಕೆ ರೂ. 6 ಲಕ್ಷ ಪರಿಹಾರ ಧನ ಮಂಜೂರಾತಿ ಆದೇಶ ಪತ್ರ ಹಸ್ತಾಂತರ

ಉಡುಪಿ ವಿಧಾನಸಭಾ ಕ್ಷೇತ್ರದ ಪಡುತೋನ್ಸೆ ಗ್ರಾಮದ ನಿವಾಸಿ ದಿ. ವಿಶ್ವನಾಥ್ ಅವರು ಮೀನುಗಾರಿಕೆ ನಡೆಸುತ್ತಿರುವಾಗ ಬೋಟ್ ನಿಂದ ಸಮುದ್ರಕ್ಕೆ ಬಿದ್ದು ಮೃತಪಟ್ಟಿರುತ್ತಾರೆ. ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ ಧನ ನೀಡುವಂತೆ ಶಾಸಕ ಶ್ರೀ ಕೆ. ರಘುಪತಿ ಭಟ್ ರವರ ಶಿಫಾರಸ್ಸು ಮಾಡಿರುವಂತೆ ಮಂಜೂರಾದ ರೂ. 6.00 ಲಕ್ಷ ಪರಿಹಾರ ಧನದ ಮಂಜೂರಾತಿ ಆದೇಶ ಪತ್ರವನ್ನು ಇಂದು ದಿನಾಂಕ 12-01-2022 ರಂದು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಮೃತ ದಿ. ವಿಶ್ವನಾಥ್ ಅವರ ತಾಯಿ ಗುಲಾಬಿ ಅವರಿಗೆ ಉಡುಪಿ ಶಾಸಕರ ಕಚೇರಿಯಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸತೀಶ್ ನಾಯ್ಕ್, ನವೀನ್ ಕಾಂಚನ್, ಮಾಲತಿ ಹಾಗೂ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಗಣೇಶ್, ಉಪ ನಿರ್ದೇಶಕರಾದ ಶಿವಕುಮಾರ್, ಸಹಾಯಕ ನಿರ್ದೇಶಕರಾದ ದಿವಾಕರ್ ಖಾರ್ವಿ ಉಪಸ್ಥಿತರಿದ್ದರು.