ಕರಾವಳಿತಾಜಾ ಸುದ್ದಿಗಳು

ಉತ್ತರ ಕನ್ನಡಕ್ಕೂ ವ್ಯಾಪಿಸಿದ ದೇವಾಡಿಗ ಅಕ್ಷಯ ಕಿರಣದ ಸೇವಾ ಕಾರ್ಯ

ದೇವಾಡಿಗ ಅಕ್ಷಯ್ ಕಿರಣ ಗ್ಲೋಬಲ್ ಫೌಂಡೇಶನ್ ಇದರ ವತಿಯಿಂದ ಈಗಾಗಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ರೋಗಿಗಳಿಗೆ ಆಶಾಕಿರಣವಾಗಿ ನಾನಾ ಬಗೆಯಲ್ಲಿ ಸಹಾಯಹಸ್ತವನ್ನು ಚಾಚಿದ್ದು ಇಂದು 93ನೇ ಸೇವಾಕಾರ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಿರಾಲಿಯಲ್ಲಿ ನಡೆಸಲಾಯಿತು.

ಕಿಡ್ನಿ ಸಮಸ್ಯೆ ಪೀಡಿತ ಭಟ್ಕಳದ ಶಿರಾಲಿಯ ನಿವಾಸಿ ಶ್ರೀ ಸುಬ್ರಮಣ್ಯ ದೇವಾಡಿಗರಿಗೆ ಅವರ ಮನೆಯಲ್ಲಿ 25 ಸಾವಿರ ರೂಪಾಯಿಯ ಸಹಾಯಧನವನ್ನು ನೀಡಲಾಯಿತು. ಇದರ ಜತೆ ಎಲ್ ಜಿ ಫೌಂಡೇಶನ್ ನ (ಉದ್ಯಮಿ ಶ್ರೀ ನಾಗರಾಜ್ ಪಡುಕೋಣೆಯವರ ) ಪರವಾಗಿ ರೂ 15,000/ ವನ್ನು ಜಂಟಿಯಾಗಿ ಹಸ್ತಾಂತರಿಸಲಾಯಿತು.
ಈ ಸೇವಾ ಕಾರ್ಯದಲ್ಲಿ
ಶ್ರೀ ಮೋಹನ್ ದೇವಾಡಿಗ, ಬಿಜೂರು
ಶ್ರೀ ಮಹಾಲಿಂಗ ದೇವಾಡಿಗ, ಬೈಂದೂರು
ಶ್ರೀ ಭರತ್ ದೇವಾಡಿಗ, ಬಿಜೂರು
ಶ್ರೀ ಶೀನ ದೇವಾಡಿಗ, ತ್ರಾಸಿ
ಶ್ರೀ ಮಧುಕರ್ ದೇವಾಡಿಗ, ಬಿಜೂರು
ಶ್ರೀ ನಾಗೇಂದ್ರ ದೇವಾಡಿಗ, ಬಿಜೂರು
ಶ್ರೀ ಅಭಿಷೇಕ ದೇವಾಡಿಗ, ಆಲೂರು
ಶ್ರೀ ರಾಜ್ ದೇವಾಡಿಗ, ಗಂಗೊಳ್ಳಿ
ಶ್ರೀ ಮಂಜುನಾಥ್ ದೇವಾಡಿಗ, ನಾಯ್ಕನಕಟ್ಟೆ
ಶ್ರೀ ಚಂದ್ರ ದೇವಾಡಿಗ, ನಾಯ್ಕನಕಟ್ಟೆ
ಶ್ರೀ ಜಗದೀಶ್ ದೇವಾಡಿಗ, ಉಪ್ಪುಂದ
ಶ್ರೀ ಪುರುಷೋತ್ತಮದಾಸ್, ಉಪ್ಪುಂದ
ಶ್ರೀ ರಾಮ ದೇವಾಡಿಗ, ಬೈಂದೂರು
ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ದೇವಾಡಿಗ ಮತ್ತು ಅವರ ಮನೆಯವರಿಗೆ ಸಾಂತ್ವನವನ್ನು ಹೇಳುವುದರ ಜೊತೆಯಲ್ಲಿ ನಾವೆಲ್ಲ ಸಮಾಜ ಬಾಂಧವರು ನಿಮ್ಮೊಂದಿಗೆ ಇದ್ದೇವೆ ಎಂಬ ಭರವಸೆಯನ್ನು ನೀಡುವುದರ ಮೂಲಕ ಅವರ ಮನಕೆ ಧೈರ್ಯ ತುಂಬುವ ಕೆಲಸವನ್ನು ಮಾಡಲಾಯಿತು.
ಈ ಸೇವಾ ಕಾರ್ಯದಲ್ಲಿ ನೆರೆದ ಅಕ್ಷಯ ಕಿರಣದ ಎಲ್ಲಾ ಸದಸ್ಯರು ದೇವಾಡಿಗ ಅಕ್ಷಯ ಕಿರಣ ಗ್ಲೋಬಲ್ ಫೌಂಡೇಶನ್ ಇಂದು ಇಷ್ಟರ ಮಟ್ಟಿಗೆ ಬೆಳವಣಿಗೆ ಹೊಂದಲು ಕಾರಣೀಕರ್ತರಾದ ಸಂಸ್ಥೆಯ ಮಹಾಪೋಷಕರು, ಸಮಾಜದ ದಾನಿಗಳು, ಇದರ ಬೆನ್ನೆಲುಬಾಗಿ ನಿಂತು ಹಗಲಿರುಳು ಸಮಾಜಮುಖೀ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸರ್ವ ಅಕ್ಷಯ ಕಿರಣದ ಸೇವಾದಾರರು ಅದರಲ್ಲೂ ವಿಶೇಷವಾಗಿ  ಅನ್ಯ ರಾಜ್ಯದಲ್ಲಿ ನೆಲೆಸಿರುವ ಕೊಡುಗೈ ದಾನಿಗಳನ್ನು, ವಿದೇಶದಲ್ಲಿ ನೆಲೆಸಿದ್ದರೂ ಸಹ ತಮ್ಮ ಸಮಾಜಕ್ಕೆ ಒಂದಿಷ್ಟು ಕಾಣಿಕೆಯನ್ನು ಕೊಡುವ ಸಹೃದಯಿ ಸಮಾಜ ಬಾಂಧವರನ್ನು ಮನದುಂಬಿ ಸ್ಮರಿಸಲಾಯಿತು.
ಇಂದಿನ ಈ ಸೇವಾಕಾರ್ಯಕ್ಕೆ  ವಾಹನದ ವ್ಯವಸ್ಥೆ ಮಾಡಿದ ಶ್ರೀ ಶೀನ ದೇವಾಡಿಗ ಮತ್ತು ಶ್ರೀ ಭರತ್ ದೇವಾಡಿಗ ಹಾಗೂ ಹಣ್ಣುಹಂಪಲುಗಳನ್ನು  ನೀಡಿದ ಚಂದ್ರ ದೇವಾಡಿಗ ನಾಯ್ಕನಕಟ್ಟೆ ಇವರಿಗೆ ವಿಶೇಷವಾದ ಕೃತಜ್ಞತೆಗಳು.
ಒಟ್ಟಿನಲ್ಲಿ ನವರಾತ್ರಿಯ ಪೂರ್ವಭಾವಿಯಾಗಿ ಈ ಸೇವಾ ಕಾರ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಜರುಗಿದ್ದು ಇದು ಇಡೀ ಸಮಾಜ ಬಾಂಧವರ ನವೋತ್ಸಾಹಕ್ಕೆ ಸಾಕ್ಷಿಯಾಯಿತು..

Related Articles

Leave a Reply

Your email address will not be published. Required fields are marked *

Back to top button
error: Content is protected !!