ರೂ. 2,94,765/- ಮೊತ್ತದ ಪ್ರಾಕೃತಿಕ ವಿಕೋಪದ ಪರಿಹಾರ ಧನ ಚೆಕ್ – ಶಾಸಕ ರಘುಪತಿ ಭಟ್ ವಿತರಣೆ

ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಉಡುಪಿ ತಾಲೂಕಿನ 11 ಕುಟುಂಬಗಳಿಗೆ ಇಂದು ದಿನಾಂಕ 04-08-2021 ರಂದು ಉಡುಪಿ ಶಾಸಕರ ಕಚೇರಿಯಲ್ಲಿ ಪರಿಹಾರ ಧನದ ಚೆಕ್ ಶಾಸಕ ಶ್ರೀ ಕೆ. ರಘುಪತಿ ಭಟ್ ವಿತರಿಸಿದರು.
ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಬೂದ ಶೆಟ್ಟಿಗಾರ್ ಅವರಿಗೆ ರೂ. 50,615/-, ಸುಮತಿ ನಾಯ್ಕ್ ಅವರಿಗೆ ರೂ. 49,660/-, ಕಡೆಕಾರು ಗ್ರಾಮದ ವಸಂತ ಪೂಜಾರಿ ಅವರಿಗೆ ರೂ. 30,560/-, ದಾಮೋದರ ಕೋಟ್ಯಾನ್ 43,930/- ಕೊಡವೂರು ಗ್ರಾಮದ ಸುಜಾತಾ ಅವರಿಗೆ ರೂ. 10,000/-, ಬೇಬಿ ಪೂಜಾರಿ ಅವರಿಗೆ ರೂ. 20 000/-, ಮಾಲತಿ ಅವರಿಗೆ ರೂ. 20,000/-, ವೇದಾವತಿ ಕಾಂಚನ ಅವರಿಗೆ ರೂ. 15,000/-, ಸುರೇಖಾ ಅವರಿಗೆ ರೂ. 20,000/-, ಮಲ್ಲಿಕಾ ದೇವಿ ಅವರಿಗೆ ರೂ. 20,000/-, ನಳಿನಿ ಅವರಿಗೆ ರೂ. 15,000/- ಸೇರಿದಂತೆ ಒಟ್ಟು ರೂ.2,94,765 ಮೊತ್ತದ ಚೆಕ್ ಶಾಸಕ ಶ್ರೀ ಕೆ. ರಘುಪತಿ ಭಟ್ ರವರ ಶಿಫಾರಸಿನ ಮೇರೆಗೆ ಮಂಜೂರಾಗಿರುತ್ತದೆ.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀಶ ಕೊಡವೂರು, ಕಡೆಕಾರ್ ಗ್ರಾಮ ಪಂಚಾಯತ್ ಸದಸ್ಯರಾದ ರಾಘವೇಂದ್ರ ಕುತ್ಪಾಡಿ ಹಾಗೂ ಉಡುಪಿ ತಹಶೀಲ್ದಾರರಾದ ಪ್ರದೀಪ್ ಕುರ್ಡೆಕರ್, ಗ್ರಾಮ ಲೆಕ್ಕಾಧಿಕಾರಿಗಳಾದ ವಾಸುದೇವ್, ಕಾರ್ತಿಕೇಯ ಉಪಸ್ಥಿತರಿದ್ದರು.