ಕರಾವಳಿ
ಉಡುಪಿ: ಖ್ಯಾತ ಸಂಗೀತ ನಿರ್ದೇಶಕ ವಾಸುದೇವ ಭಟ್ ನಿಧನ

ಉಡುಪಿ: ಉಡುಪಿಯ ಖ್ಯಾತ ಸಂಗೀತ ನಿರ್ದೇಶಕ, ಹಿರಿಯ ಪತ್ರಕರ್ತ, ಇಂದ್ರಾಳಿ ನಿವಾಸಿ ವಾಸುದೇವ ಭಟ್ ನಿಧನರಾಗಿದ್ದಾರೆ. ಉಡುಪಿಯಲ್ಲಿ ನಾದ ವೈಭವಂ ಎಂಬ ಕಲಾ ಸಂಘಟನೆಯನ್ನು ಹುಟ್ಟು ಹಾಕಿ, ಸಂಗೀತ ನತ್ಯ ರೂಪಕ ಹಾಗೂ ಚಲನಚಿತ್ರಗಳನ್ನು ರಚಿಸಿ ನಿರ್ದೇಶಿಸಿ ಪಾತ್ರವನ್ನು ಮಾಡಿ ಸೈ ಎನಿಸಿಕೊಂಡವರು.ಅನೇಕ ಖ್ಯಾತ ಗಾಯಕರಿಗೆ ಗುರುಗಳಾಗಿದ್ದ ವಾಸುದೇವ ಭಟ್, ಅಪಾರ ಸಂಗೀತ ಕ್ಷೇತ್ರದ ಶಿಷ್ಯ ವೃಂದನ್ನು ಆಗಲಿದ್ದಾರೆ.
1994 ರಲ್ಲಿ ಭುವನ ಜ್ಯೋತಿ ಎಂಬ ಐದು ಭಾಷೆಗಳಲ್ಲಿ ರಚಿತವಾದ ಪ್ರಭು ಯೇಸು ಸ್ವಾಮಿಯ ಜೀವನಾಧಾರಿತ ಚಲನಚಿತ್ರ ತಯಾರಿಸಿ ಹಲವರಿಗೆ ಪಾತ್ರ ನೀಡಿದ್ದರು. ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ, ಅವರಿಂದ ಸಂಗೀತ ಕಲಿತವರು ರಾಷ್ಟ್ರಮಟ್ಟದಲ್ಲಿ ಹಾಡುಗಾರಿಕೆಯಲ್ಲಿ ಮನ್ನಣೆ ಪಡೆದಿದ್ದಾರೆ.