ರಾಜ್ಯ
ಹುಬ್ಬಳ್ಳಿಯಿಂದ ಮಂಗಳೂರು ಮತ್ತು ಮೈಸೂರಿಗೆ ಸಂಪರ್ಕ ಒದಗಿಸುವ ವಿಮಾನ ಸೇವೆ ಮೇ1 ರಿಂದ ಆರಂಭ

ನವದೆಹಲಿ : ಮಂಗಳೂರು-ಹುಬ್ಬಳ್ಳಿ ಸಂಚರಿಸುವವರಿಗೆ ಗುಡ್ ನ್ಯೂಸ್ ಲಭ್ಯವಾಗಿದ್ದು, ಮೇ 1ರಿಂದ ಮಂಗಳೂರು-ಹುಬ್ಬಳ್ಳಿ ವಿಮಾನಯಾನ ಆರಂಭಗೊಳ್ಳಲಿದೆ.
ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಮಂಗಳೂರು ಹಾಗೂ ಹುಬ್ಬಳ್ಳಿ ನಡುವೆ ಇಂಡಿಗೋ ವಿಮಾನ ಹಾರಾಟ ನಡೆಸಲಿದ್ದು, ವಾರದ ನಾಲ್ಕು ದಿನಗಳ ಕಾಲ ವಿಮಾನ ಹಾರಾಟ ನಡೆಸಲಿದೆ.
ಅದೇ ರೀತಿ ಹುಬ್ಬಳ್ಳಿ ಮೈಸೂರು ವಿಮಾನಯಾನ ಆರಂಭಗೊಳ್ಳಲಿದ್ದು, ವಾರದ ಮೂರು ದಿನಗಳ ಕಾಲ ಹಾರಾಟ ನಡೆಸಲಿದೆ. ಇದು ಮೇ ಮೂರರಿಂದ ಆರಂಭಗೊಳ್ಳಲಿದೆ.
ಇದನ್ನು ಸಾಧ್ಯವಾಗಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಇಂಡಿಗೋದ ಆಡಳಿತ ವರ್ಗಕ್ಕೆ ಸಚಿವ ಜೋಶಿಯವರು ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದ್ದಾರೆ.