ಕರಾವಳಿ

ಗಣರಾಜ್ಯೋತ್ಸವ ಪರೇಡ್‌ಗೆ ನಾರಾಯಣ ಗುರುಗಳ ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರ ಸರ್ಕಾರದ ನಿರ್ಧಾರ ಖಂಡನೀಯ : ಪ್ರವೀಣ್ ಎಂ ಪೂಜಾರಿ

ಗಣರಾಜ್ಯ ದಿನದಂದು ನಡೆಯುವ ವಿಶೇಷ ಪರೆಡ್‌ನಲ್ಲಿ ಲೋಕಶಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ತಿರಸ್ಕರಿಸುವ ಅತ್ಯಂತ ಕೆಟ್ಟ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿದೆ. ಸಂವಿಧಾನದ ಆಶಯಗಳನ್ನು ತನ್ನ ಬದುಕು ಮತ್ತು ಇಚ್ಚಾಶಕ್ತಿಯ ಮೂಲಕ ಸಾಧಿಸಿ ತೋರಿಸಿದ ಜಗದ್ಗುರುವೆನಿಸಿದವರಿಗೆ ಸಂವಿಧಾನ ಜಾರಿಗೆ ಬಂದ ದಿನವೆ ಅವಮಾನ ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆಯಲ್ಲಿ ಇರುವ ಹುನ್ನಾರ ಬಹಿರಂಗಗೊಳ್ಳಬೇಕು.

ಸಾತ್ವಿಕ ಸಂದೇಶಗಳ ಮಾನವೀಯ ಮೌಲ್ಯದಿಂದ ಒಮ್ಮತದ ಸಮಾಜವನ್ನು ಪ್ರತಿಪಾದಿಸಿದ ಗುರುಗಳ ಅದರ್ಶ ಪ್ರಸ್ತುತ ಅತಿ ಅಗತ್ಯವೆನಿಸಿದೆ.ಕೇರಳ ಸರ್ಕಾರದ ಶಿಫಾರಸ್ಸನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರ ಈ ಕೂಡಲೆ ನಿರ್ಧಾರ ಬದಲಾಯಿಸಬೇಕೆಂಬುದೆ ನಮ್ಮ ಒತ್ತಾಯ.ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ ಸಂಚಲನ ಮೂಡಿಸಿ ಸಮಾಜ ಸುಧಾರಣೆ ಮಾಡಿದ ಸರ್ವಶ್ರೇಷ್ಠ ಸಂತನಿಗೆ ಸೂಕ್ತ ಗೌರವವನ್ನು ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!