ಖಾಸಗಿ ಶಾಲೆಯನ್ನು ಸರಕಾರಿ ಶಾಲೆಯಾಗಿ ಹಸ್ತಾಂತರ ಕಾರ್ಯಕ್ರಮ

ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ನಂಚಾರು ಇದನ್ನು ಸರಕಾರಿ ಶಾಲಾ ವ್ಯಾಪ್ತಿಗೆ ತೆಗೆದುಕೊಳ್ಳಲಾಗಿದ್ದು, ಇಂದು ದಿನಾಂಕ 02-11-2021 ರಂದು ನಡೆದ “ಖಾಸಗಿ ಶಾಲೆಯನ್ನು ಸರಕಾರಿ ಶಾಲೆಯಾಗಿ ಹಸ್ತಾಂತರ ಕಾರ್ಯಕ್ರಮ”ದಲ್ಲಿ ಶಾಸಕರಾದ ಶ್ರೀ ಕೆ ರಘುಪತಿ ಭಟ್ ರವರು ಭಾಗವಹಿಸಿದರು.
ಈ ಸಂದರ್ಭ 30 ಫಲಾನುಭವಿಗಳಿಗೆ ಒಟ್ಟು ರೂ. 3,40,900/- ಮೊತ್ತದ ಪ್ರಾಕೃತಿಕ ವಿಕೋಪದ ಪರಿಹಾರ ಧನದ ಚೆಕ್ಕನ್ನು ಶಾಸಕರು ವಿತರಿಸಿದರು
.
ನಾಲ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ನಾಯ್ಕ್, ಉಪಾಧ್ಯಕ್ಷರಾದ ಸುಮಿತ್ರಾ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪ್ರತಾಪ್ ಹೆಗ್ಡೆ ಮಾರಾಳಿ, ಎ.ಪಿ.ಎಂ.ಸಿ ಅಧ್ಯಕ್ಷರಾದ ಸತೀಶ್ ಶೆಟ್ಟಿ, ಎಸ್.ಡಿ.ಎಂ.ಸಿ ಸದಸ್ಯರಾದ ಶೇಖರ್, ನಾಲ್ಕೂರು ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್, ರತ್ನಾಬಾಯಿ, ಪ್ರಾಂಶುಪಾಲರು, ಶಾಲೆಯ ಸಂಚಾಲಕರಾದ ವಿಶ್ವನಾಥ ಕರಬ, ಬ್ರಹ್ಮಾವರ ತಹಶೀಲ್ದಾರರಾದ ರಾಜಶೇಖರ್ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾಗಳಾದ ಓ.ಆರ್ ಪ್ರಕಾಶ್, ಕಂದಾಯ ನಿರೀಕ್ಷಕರಾದ ಲಕ್ಷ್ಮೀನಾರಾಯಣ ಭಟ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.