ಮಲ್ಪೆ: ನಾಳೆ (ನ.14) ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ನ ವರ್ಷಾಚರಣೆ ಸಂಭ್ರಮ

ಉಡುಪಿ ನ.12: ಮಲ್ಪೆ ಬೀಚ್ ನ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ಇದರ ವಿಂಚ್ ಪ್ಯಾರ ಸೈಲಿಂಗ್ ಬೋಟ್ ನ ವರ್ಷಾಚರಣೆ ಕಾರ್ಯಕ್ರಮ ನ.14 ರಂದು ಸಂಜೆ 4.30 ಕ್ಕೆ ಮಲ್ಪೆ ಕಡಲ ಕಿನಾರೆಯಲ್ಲಿ ನಡೆಯಲಿದೆ.
ವಿಂಚ್ ಪ್ಯಾರ ಸೈಲಿಂಗ್ ಬೋಟ್ ನ ವರ್ಷಾಚರಣೆ ಸಂಭ್ರಮದ ಪ್ರಯುಕ್ತ ಕಾರ್ಯಕ್ರಮದಲ್ಲಿ ಉಡುಪಿಯ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ 100ಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಗಾಂಧಿ ಶತಾಬ್ಧ ಅಂಗ್ಲಮಾಧ್ಯಮ ಶಾಲೆಗೆ ಪೀಠೋಪಕರಣ ವಿತರಣೆ ಮಾಡಲಾಗುವುದು ಹಾಗೂ ಸ್ಥಳೀಯ ಯುವ ಸಾಧಕರಿಗೆ ಸನ್ಮಾನ ಮಾಡುವ ಕಾರ್ಯಕ್ರಮವೂ ನಡೆಯಲಿದೆ.
ಈ ಸಮಾರಂಭವನ್ನು ಉಡುಪಿ ಶಾಸಕ ರಘುಪತಿ ಭಟ್, ದ.ಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ನ ಅಧ್ಯಕ್ಷ ಯಶ್ ಪಾಲ್ ಸುವರ್ಣ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭಾ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ, ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಾಂಡುರಂಗ ಮಲ್ಪೆ ಅವರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ನಗರ ಸಭೆ ನಾಮ ನಿರ್ದೇಶಿತ ಸದಸ್ಯ ವಿಜಯ ಕುಂದರ್, ಮಲ್ಪೆ ಸೆಂಟ್ರಲ್ ವಾರ್ಡ್ ನ ನಗರಸಭಾ ಸದಸ್ಯೆ ಎಡ್ಲಿನ್ ಕರ್ಕಡ, ಕೊಡವೂರು ವಾರ್ಡ್ ನ ನಗರಸಭಾ ಸದಸ್ಯ ವಿಜಯ ಕೊಡವೂರು, ಕಲ್ಮಾಡಿ ವಾರ್ಡ್ ನ ನಗರಸಭಾ ಸದಸ್ಯ ಸುಂದರ್ ಜೆ.ಕಲ್ಮಾಡಿ, ಹಿಂದೂ ಯುಸೇನೆ ಉಡುಪಿ ಇದರ ಜಿಲ್ಲಾಧ್ಯಕ್ಷ ಮಂಜು ಕೊಳ, ಮಂತ್ರ ಟೂರಿಸಂನ ಆಡಳಿತ ನಿರ್ದೇಶಕ ಮತ್ತು ಮಲ್ಪೆ ಬೀಚ್ ನಿರ್ವಾಹಕ ಸುದೇಶ್ ಶೆಟ್ಟಿ, ಮಲ್ಪೆ ಶಿವ ಪಂಚಾಕ್ಷರಿ ಭಜನಾ ಮಂದಿರದ ಅಧ್ಯಕ್ಷ ವಿಕ್ರಮ್ ಟಿ.ಶ್ರೀಯಾನ್, ಉಡುಪಿ ಜಿಲ್ಲೆಯ ಮೊಗವೀರ ಯುವ ಸಂಘಟನೆಯ ನಿಕಟ ಪೂರ್ವ ಅಧ್ಯಕ್ಷ ವಿನಯ್ ಕರ್ಕೇರ, ಮಲ್ಪೆಯ ಜ್ಞಾನ ಜ್ಯೋತಿ ಭಜನಾ ಮಂದಿರದ ಅಧ್ಯಕ್ಷ ವಿಜಯ ತಿಂಗಳಾಯ, ಹನುಮಾನ್ ವಿಠೋಬಾ ಭಜನಾ ಮಂದಿರ ದ ಅಧ್ಯಕ್ಷ ರವಿ ಕರ್ಕೇರ, ಶ್ರೀಪಂಡರಿನಾಥ ಭಕ್ತಿ ಉದಯ ಭಜನಾ ಮಂದಿರದ ಅಧ್ಯಕ್ಷ ಸುಭಾಷ್ ಸಾಲ್ಯಾನ್, ಕೊಳದ ಬಾಲಕರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಕರುಣಾಕರ್ ಸಾಲ್ಯಾನ್ ಉಪಸ್ಥಿತರಿರಲಿದ್ದಾರೆ ಎಂದು ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ನ ಆಡಳಿತ ವಿಭಾಗ ಮಾಹಿತಿ ನೀಡಿದೆ. ಮಲ್ಪೆ ಕಡಲ ತೀರದಲ್ಲಿ ಅತ್ಯಾಧುನಿಕ ಸೌಕರ್ಯಗಳು, ನುರಿತ ಈಜುಗಾರರು, ಲೈಫ್‌ಬಾಯ್, ಲೈಫ್ ಜಾಕೇಟ್ ಸಹಿತ ಸುರಕ್ಷಿತ ಸಾಧನಗಳನ್ನು ಒಳಗೊಂಡ ಸ್ಪೀಡ್‌ಬೋಟ್ ಮತ್ತು ವಾಟರ್ ಸ್ಫೋರ್ಟ್ಸ್ ಸೇವೆ ಲಭ್ಯವಿದೆ. ಇದರೊಂದಿಗೆ ಸೈಂಟ್ ಮೇರಿಸ್ ದ್ವೀಪಕ್ಕೆ ಬೆಳಿಗ್ಗೆ 8.30 ರಿಂದ5.30 ರ ವರೆಗೆ ಬೋಟ್ ವ್ಯವಸ್ಥೆ ಕೂಡಾ ಲಭ್ಯವಿದೆ.