ಬ್ಯುಸಿನೆಸ್ ಟಾನಿಕ್ “ನ 150ನೇ ಸಂಚಿಕೆಯ ಸಮಾರಂಭದಲ್ಲಿ ಸಿ ಎ ಎಸ್ ಎಸ್ ನಾಯಕ್ ಅವರಿಗೆ ಸನ್ಮಾನ

ಕಳೆದ 149 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಉದ್ಯಮ ವಲಯ ಹಾಗೂ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿರುವ, ‘ಬ್ಯುಸಿನೆಸ್ ಟಾನಿಕ್’ ನ ನಿರ್ದೇಶಕರು, ಮುಖ್ಯ ಸ೦ಯೋಜಕರು ಮತ್ತು ನಿರೂಪಕರಾದ ಸಿ ಎ ಎಸ್ ಎಸ್ ನಾಯಕ್ ಇವರಿಗೆ ನಮ್ಮ ಕುಡ್ಲದ ವತಿಯಿಂದ ಸನ್ಮಾನಿಸಲಾಯಿತು
ನಮ್ಮ ಕುಡ್ಲ 24×7 ವಾಹಿನಿಯಲ್ಲಿ ಕರ್ಣಾಟಕ ಬ್ಯಾಂಕ್ “ಬ್ಯುಸಿನೆಸ್ ಟಾನಿಕ್” ಇದೀಗ ತನ್ನ ನೂರ ಐವತ್ತನೇ ಸ೦ಚಿಕೆಯ ಕಾರ್ಯಕ್ರಮವನ್ನು ಆದಿತ್ಯವಾರ ಜನವರಿ 16, 2022 ರಂದು ಬೆಳಿಗ್ಗೆ 9:00 ಕ್ಕೆ ಮಂಗಳೂರು ನಗರದ ಕೆನರಾ ಹೈಸ್ಕೂಲ್ ಕ್ಯಾಂಪಸ್ ಡೊಂಗರಕೇರಿಯ ‘ಶ್ರೀ ಸುಧೀಂದ್ರ ಆಡಿಟೋರಿಯಂ’ ನಲ್ಲಿ ಆಚರಿಸಿತು . ಕರ್ಣಾಟಕ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ಣಾಟಕ ಬ್ಯಾಂಕಿನ MD ಹಾಗೂ CEO ಆದ ಶ್ರೀ ಎಂ. ಎಸ್. ಮಹಾಬಲೇಶ್ವರವರು ದೀಪ ಬೆಳಗಿಸಿದರು ಹಾಗೂ ಇಸ್ಕಾನ್ ಮಂಗಳೂರು ಇದರ ಕಾರ್ಯದರ್ಶಿಗಳಾದ ಶ್ರೀ ಸನಂದನ ದಾಸ
ಸ್ವಾಮೀಜಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು . ಖ್ಯಾತ ಲೆಕ್ಕ ಪರಿಶೋಧಕರಾದ ಸಿಎ ರುದ್ರಮೂರ್ತಿ ಹಾಗೂ ಸಿಎ ಅನಿಲ್ ಭಾರದ್ವಾಜ್, ಬೆಂಗಳೂರು ಇವರು 150ನೇ ಸ೦ಚಿಕೆಗೆ ಸ೦ಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ “ಫೈನಾನ್ಶಿಯಲ್ ಫ್ರೀಡಮ್ ಫ್ರಾಮ್ ಸ್ಟಾಕ್ ಮಾರ್ಕೆಟ್ “ ವಿಷಯವನ್ನು ಮಂಡಿಸಿದರು .
ಫಿಝಾ ಗ್ರೂಪ್ ಆಫ್ ಕಂಪೆನಿ ಬೆಂಗಳೂರು ಇದರ ಚೆಯರ್ ಮೆನ್ ಶ್ರೀ ಬಿ ಎಂ ಫಾರೂಕ್, ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಇದರ ಚೆಯರ್ ಮೆನ್ ಶ್ರೀ ರವಿರಾಜ್ ಹೆಗ್ಡೆ , ಹ್ಯಾಂಗ್ಯೋ ಐಸ್ ಕ್ರೀಮ್ ಪ್ರೈ ಲಿ ನ ಆಡಳಿತ ನಿರ್ದೇಶಕರಾಗಿರುವ ಶ್ರೀ ಪ್ರದೀಪ್ ಜಿ ಪೈ ಮುಖ್ಯ ಅತಿಥಿಗಳಾಗಿ ಈ ಸಂಭ್ರಮ ದಲ್ಲಿ ಭಾಗವಹಿಸಿದರು. ಈ ಕಾಯ೯ಕ್ರಮವು ನಮ್ಮ ಕುಡ್ಲ 24×7 ವಾಹಿನಿಯಲ್ಲಿ ಪ್ರಸಾರವಾಗುವುದರ ಜೊತೆಗೆ, ಯೂಟ್ಯೂಬ್ ಮತ್ತು ಫೇಸ್ ಬುಕ್ ನಲ್ಲೂ ಲೈವ್ ಪ್ರಸಾರವಾಗಿತ್ತು .
ಇದೇ ಸಂದರ್ಭದಲ್ಲಿ , ಕಳೆದ 149 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಉದ್ಯಮ ವಲಯ ಹಾಗೂ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿರುವ, ‘ಬ್ಯುಸಿನೆಸ್ ಟಾನಿಕ್’ ನ ನಿರ್ದೇಶಕರು, ಮುಖ್ಯ ಸ೦ಯೋಜಕರು ಮತ್ತು ನಿರೂಪಕರಾದ ಸಿ ಎ ಎಸ್ ಎಸ್ ನಾಯಕ್ ಇವರಿಗೆ ನಮ್ಮ ಕುಡ್ಲದ ವತಿಯಿಂದ ಸನ್ಮಾನಿಸಲಾಯಿತು. ನಮ್ಮ ಕುಡ್ಲ 24×7 ವಾಹಿನಿಯು ಕರ್ಣಾಟಕ ಬ್ಯಾಂಕ್ ಮುಖ್ಯ ಪ್ರಾಯೋಜಕತ್ವದ ಅತ್ಯ೦ತ ಜನಪ್ರಿಯ “ಬ್ಯುಸಿನೆಸ್ ಟಾನಿಕ್ ನೇರ ಫೋನ್ ಇನ್ ಕಾಯ೯ಕ್ರಮವು ಯಶಸ್ವಿಯಾಗಿ 150 ಸ೦ಚಿಕೆಗಳನ್ನು ಮುಗಿಸುವ ಹೊಸ್ತಿಲಲ್ಲಿದೆ. ಜಿ. ಎಸ್. ಟಿ, ಇನ್ ಕಮ್ ಟಾಕ್ಸ್, ಇನ್ಸೂರೆನ್ಸ್, ಪ್ರಾವಿಡೆಂಟ್ ಫಂಡ್, ಹೂಡಿಕೆ, RERA, IPR, ಇನ್ ಕಮ್ ಟ್ಯಾಕ್ಸ್, ಕನ್ಸ್ಯೂಮರ್ ಪ್ರೊಟೆಕ್ಷನ್,ಕಾನೂನಿನ ಪರಿಚಯ, ಆತ್ಮ ನಿರ್ಭರ ಭಾರತ, ಎಂಎಸ್ಎಂಇ, ನ್ಯೂ ಎಜುಕೇಶನ್ ಪಾಲಿಸಿ. ಕರ್ನಾಟಕ ನೂತನ ಕೈಗಾರಿಕಾ ನೀತಿ, ಇತ್ಯಾದಿ ವಿಷಯಗಳ ಬಗ್ಗೆ ವಿವಿಧ ವಲಯಗಳ ತಜ್ಞರಿಂದ ಮಾಹಿತಿ ಹಾಗೂ ಸಲಹೆಗಳನ್ನು ನೀಡುವ ಮೂಲಕ ನಾಡಿನಾದ್ಯ೦ತ ಜನರ ಮೆಚ್ಚುಗೆಗೆ ಪಾತ್ರವಾಗಿದೆ.ನಮ್ಮ ಕುಡ್ಲ ವಾಹಿನಿಯು ಕರಾವಳಿ ಕರ್ನಾಟಕದ ಅತ್ಯಂತ ಜನಪ್ರಿಯ ವಾಹಿನಿಯಾಗಿದೆ ಹಾಗೂ ಕರ್ನಾಟಕ ಬ್ಯಾಂಕ್ ಪ್ರಾಯೋಜಿತ ಬಿಸಿನೆಸ್ ಟಾನಿಕ್ ಕಾರ್ಯಕ್ರಮವು
ಪ್ರತಿ ಭಾನುವಾರ ಬೆಳಿಗ್ಗೆ 10 ರಿಂದ 11-30 ವರೆಗೆ ಪ್ರಸಾರವಾಗುತ್ತಿದ್ದು ಎಲ್ಲಾ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ವೀಕ್ಷಕರು ತಮ್ಮ ಪ್ರಶ್ನೆಯನ್ನು “Live” ಕಾರ್ಯಕ್ರಮದಲ್ಲಿ ಕೇಳಿ ಸಂದೇಹ ಪರಿಹರಿಸಬಹುದು ಎಂದು ನಮ್ಮ ಕುಡ್ಲ ನಿರ್ದೇಶಕರಾದ ಲೀಲಾಕ್ಷ ಬಿ ಕರ್ಕೇರ ಇವರು ಹೆಮ್ಮೆಯಿಂದ ತಿಳಿಸಿದರು. ಕಾರ್ಯಕ್ರಮವನ್ನು ಸಿ ಎ ಯಶಸ್ವಿನಿ ಕೆ ಅಮೀನ್ ಹಾಗೂ ನಿತಿನ್ ಸಾಲಿಯಾನ್ ಯವರು ಯಶಸ್ವಿಯಾಗಿ ನಿರೂಪಿಸಿದರು. ಹರೀಶ್ ಬಿ ಕರ್ಕೇರ ರವರು ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ 100 ನೇ ಸಂಚಿಕೆ ಯಿಂದ 150 ನೇ ಸಂಚಿಕೆಯವರೆಗೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಎಲ್ಲಾ ಅತಿಥಿಗಳನ್ನು ಸನ್ಮಾನಿಸಿ , ವೀಕ್ಷಕರೊಂದಿಗೆ ನೇರ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.