ಎಲ್ಲಾ ಆಯಾಮಗಳಲ್ಲಿ ಚರ್ಚಿಸಿ ವೀಕೆಂಡ್ ಕರ್ಫ್ಯೂ ಬಗ್ಗೆ ಸೂಕ್ತ ನಿರ್ಧಾರ’ – ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು : ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯ್ಲಲ್ಲಿ ಆರೋಗ್ಯದ ದೃಷ್ಟಿಯಿಂದ ತಜ್ಞರು ಅಭಿಪ್ರಾಯ ಹೇಳುತ್ತಾರೆ. ಅದರೊಂದಿಗೆ ಕೇಂದ್ರದ ಸಚಿವರು ಸೇರಿ ಹಲವರು ತಮ್ಮ ಅಭಿಪ್ರಾಯ ಹೇಳಲಿದ್ದು, ಇದೆಲ್ಲ ಗಮನಿಸಿ ವಿಶೇಷವಾಗಿ ತಜ್ಞರ ಅಭಿಪ್ರಾಯ ಆಧರಿಸಿ ನಿರ್ಧಾರ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇಂದು ಸಭೆ ನಡೆಯಲ್ಲಿ ತಜ್ಞರು ಸಭೆಯಲ್ಲೇ ಅಭಿಪ್ರಾಯ ತಿಳಿಸುತ್ತಾರೆ. ಮುಂದಿನ ಕೊರೊನಾ ಸ್ಥಿತಿಗತಿ ನೋಡಿಕೊಂಡು, ಎಲ್ಲಾ ಆಯಾಮಗಳಿಂದಲೂ ಚರ್ಚಿಸಿ ಒಂದು ಸೂಕ್ತ ನಿರ್ಧಾರ ಮಾಡುತ್ತೇವೆ. ವೈಜ್ಞಾನಿಕ ದೃಷ್ಟಿಕೋನಗಳಿಂದ ಅವಲೋಕಿಸಿ ವೀಕೆಂಡ್ ಕರ್ಫ್ಯೂ ವಿಚಾರ ಸೇರಿ ಎಲ್ಲದರ ಬಗ್ಗೆ ತೀರ್ಮಾನ ಮಾಡಲಾಗುತ್ತದೆ” ಎಂದರು.
ಇನ್ನು ಕೊರೊನಾ ಪರಿಹಾರದ ಚೆಕ್ ಬೌನ್ಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಯಾದಗಿರಿಯಲ್ಲಿ ಈ ಪ್ರಕರಣ ನಡೆದಿದ್ದು, ಅದನ್ನು ಪರಿಶೀಲಿಸಿ ಸರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.