ರಾಜ್ಯ

ಫೋಟೋ ಶೂಟ್ ಮಾಡುವಾಗ ರೈಲು ಡಿಕ್ಕಿ : ಯುವಕ ಸ್ಥಳದಲ್ಲೇ ಸಾವು.!

ದಾವಣಗೆರೆ: ರೈಲ್ವೆ ಹಳಿ ಮೇಲೆ ಫೋಟೋ ಶೂಟ್ ಮಾಡುತ್ತಿದ್ದಾಗ ರೈಲು ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲಿ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯ ಡಿಸಿಎಂ ಟೌನ್‌ ಶಿಪ್ ಬಳಿ ನಡೆದಿದೆ.

ಸಚಿನ್‌(16) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಪಕ್ಕದ ಹಳಿಯಲ್ಲಿ ರೈಲು ಹೋಗುತ್ತದೆ ಎಂದು ಅಲ್ಲಿಯೇ ನಿಂತ ಪರಿಣಾಮ ರೈಲು ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!