ಅಂತಾರಾಷ್ಟ್ರೀಯ

ಹೌಥಿ ಬಂಡುಕೋರರ ಕ್ಷಿಪಣಿ ದಾಳಿ ಧ್ವಂಸಗೊಳಿಸಿದ ಸೌದಿ

ರಿಯಾದ್: ಸೌದಿ ಅರೇಬಿಯಾದ ಮಹತ್ವದ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಹೌಥಿ ಬಂಡುಕೋರರು ಹಾರಿಸಿದ ಎರಡು ಕ್ಷಿಪಣಿಗಳನ್ನು ಧ್ವಂಸಗೊಳಿಸಿರುವುದಾಗಿ ಸೌದಿಯ ರಕ್ಷಣಾ ಇಲಾಖೆ ಹೇಳಿದೆ.

ಕಳೆದ ವಾರ ಹೌಥಿ ಬಂಡುಕೋರರು ಸೌದಿ ಅರೇಬಿಯಾದ ತೈಲ ಸಂಗ್ರಹಗಾರದ ಮೇಲೆ ನಡೆಸಿದ ದಾಳಿಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಮೂರು ಮಂದಿ ಮೃತಪಟ್ಟಿದ್ದರು.

ಕಳೆದ ಆರು ವರ್ಷಗಳಿಂದ ಹೌಥಿ ಬಂಡುಕೋರರು ಸೌದಿ ಅರೇಬಿಯಾದ ಮೇಲೆ ಡ್ರೋಣ್ ಮತ್ತು ಕ್ಷಿಪಣಿ ದಾಳಿ ನಡೆಸುತ್ತಿದೆ. ಹೌಥಿ ದಾಳಿ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ವಾಯು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!