ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಸಮಗ್ರ ನಿರ್ವಹಣೆ ಕುರಿತು ಸಭೆ

ಸರ್ಕಾರಿ ಡಯಾಲಿಸಿಸ್ ಘಟಕವನ್ನು ಈ ಹಿಂದೆ ಬಿ.ಆರ್. ಶೆಟ್ಟಿ ಆಸ್ಪತ್ರೆಯವರು ನಿರ್ವಹಿಸುತ್ತಿದ್ದು, ಅಲ್ಲಿ ಸಮಸ್ಯೆ ಇದ್ದುದರಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ವಹಿಸಿ ಪ್ರಸ್ತುತ ಸಂಜೀವಿನಿ ಏಜೆನ್ಸಿಯವರಿಗೆ ಅದರ ನಿರ್ವಹಣೆ ವಹಿಸಿರುವುದರಿಂದ ಡಯಾಲಿಸಿಸ್ ಘಟಕ ಸಮಗ್ರ ನಿರ್ವಹಣೆಯ ಕುರಿತು ಜಿಲ್ಲಾಧಿಕಾರಿಗಳಾದ ಕೂರ್ಮಾ ರಾವ್ ಎಂ. ಅವರ ಅಧ್ಯಕ್ಷತೆಯಲ್ಲಿ ಇಂದು ದಿನಾಂಕ 31-01-2022 ರಂದು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಭಾಗವಹಿಸಿದರು.
ಸಭೆಯಲ್ಲಿ 13 ವರ್ಷ ಅನುಭವವುಳ್ಳ ಡಯಾಲಿಸಿಸ್ ಟೆಕ್ನಿಷನ್ ರನ್ನು ಶೀಘ್ರದಲ್ಲಿ ನೇಮಕ ಮಾಡಿಕೊಳ್ಳುವುದು ಮತ್ತು ಪ್ರಸ್ತುತ ದಿನಕ್ಕೆ 30 ಡಯಾಲಿಸಿಸ್ ಪ್ರಕರಣಗಳನ್ನು ನಡೆಸಲಾಗುತ್ತಿದ್ದು ಅದನ್ನು ಫೆಬ್ರುವರಿ 10 ತಾರೀಖಿನ ನಂತರದಿಂದ ದಿನಕ್ಕೆ 40 ಡಯಾಲಿಸಿಸ್ ಪ್ರಕರಣಗಳನ್ನು ನಡೆಸುವಂತೆ ನಿರ್ಧರಿಸಲಾಯಿತು.
ಬಳಿಕ ಡಯಾಲಿಸಿಸ್ ನಡೆಸುವ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳಾದ ನಾಗಭೂಷಣ್ ಉಡುಪ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಮಧುಸೂದನ್ ನಾಯಕ್, ಸಂಜೀವಿನಿ ಏಜೆನ್ಸಿಯ ರವೀಂದ್ರನಾಥ್ ಚಕ್ರವರ್ತಿ, ಅಭಿಜಿತ್ ಉಪಸ್ಥಿತರಿದ್ದರು.