ಮಣಿಪಾಲ ಮಾದಕ ವಸ್ತು ಸೇವನೆ 13 ವಿದ್ಯಾರ್ಥಿಗಳು ವಶಕ್ಕೆ

ಉಡುಪಿ : ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ
ಉಡುಪಿಯಲ್ಲಿ 13 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಣಿಪಾಲ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಅವರು ಸೆ.28 ರಂದು ಇತರ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿ, ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಶ್ ಶರ್ಮಾ(19), ಪ್ರಥಮೇಶ್ ಬಿ. ಪೈ (20) ರೋಹನ್ ಬ್ಯಾನಿ (20), ಯಶ್ ಮಯೂರ್ ದೋಶಿ (20), ಯಶ್ ಇದ್ರಿತ್ ವೈವಾಲ್ (20), ಕೊಮ್ಮುರಿ ಸಿದ್ದಿ
ಸುಹಾಸ್ (20), ಪ್ರನೀತ್ ನರಪರಾಜು (21), ಏಕಾನ್ಸ್ ರೋಹಿತ್ ಆಗಾಲ್ (21), ಆದರ್ಶ ಮೋಹನ್ (21), ವೇದಾಂತ್ ಶೆಟ್ಟಿ (20), ಷಬ್‌ಜೋತ್ಸ ಸಂಧು (21), ಎಂವರನ್ನು ಹಾಗೂ ಉಡುಪಿ ಸೆನ್ ಅಪರಾಧ ವಿಭಾಗದ ಪೊಲೀಸ್ ನಿರೀಕ್ಷಕ ಮಂಜುನಾಥ ಅವರು ಇತರ ಸಿಬ್ಬಂದಿಗಳೊಂದಿಗೆ ಹೆರ್ಗ ಗ್ರಾಮದ ಸರಳಬೆಟ್ಟು ಕೊಡಂಗೆಕಟ್ಟೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮನುಕೃಷ್ಣನ್ (21) ವಿಷ್ಣು ಬಾಬುರಾಜ್ (20) ಎಂಬ ಇಬ್ಬರನ್ನು ಮಾದಕ ವಸ್ತು ಸೇವಿಸಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.
ಇವರ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ 11 ಹಾಗೂ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ಸೇರಿ ಒಟ್ಟು 13 ಮಾದಕ ವಸ್ತು ಸೇವನೆ ಪ್ರಕರಣ ದಾಖಲಾಗಿದೆ.