ಕರಾವಳಿ
ಮೀನುಗಾರಿಕಾ ಬೋಟ್ ಡಿಕ್ಕಿ-ಲಕ್ಷಾಂತರ ರೂ. ನಷ್ಟ

ಮೀನುಗಾರಿಕಾ ಬೋಟ್‌ವೊಂದಕ್ಕೆ ಮತ್ತೊಂದು ಬೋಟ್ ಡಿಕ್ಕಿ ಹೊಡೆದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಮಲ್ಪೆಯಲ್ಲಿ ನಿನ್ನೆ ನಡೆದಿದೆ.
ಗುರುದಾಸ್ ಸಾಲ್ಯಾನ್ ಅವರಿಗೆ ಸೇರಿದ ಸ್ವರ್ಣದೀಪ ಬೋಟ್‌ಗೆ ಮೊತ್ತೊಂದು ಬೋಟ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮವಾಗಿ ಬೋಟ್ ಹಾನಿಗೊಂಡು ಒಳಗೆ ನೀರು ಬರಲಾರಂಬಿಸಿತು.ಕತ್ತಲಾದ್ದರಿಂದ ಬೋಟಿನಲ್ಲಿದ್ದ ಕಾರ್ಮಿಕರಿಗೆ ಡಿಕ್ಕಿ ಹೊಡೆದ ಬೋಟನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.ಬೋಟನ್ನು ಬಂದರಿನೊಳಗೆ ತರಲಾಯಿತು.ಘಟನೆಯಿಂದ ಸುಮಾರು 40 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.