ರಾಷ್ಟ್ರೀಯ
ಮಹಾಭಾರತದ ಭೀಮ ಖ್ಯಾತಿಯ ನಟ ಪ್ರವೀಣ್ ಕುಮಾರ್ ಇನ್ನಿಲ್ಲ

ನವದೆಹಲಿ: ದೇಶದಲ್ಲಿ ಮನೆ ಮಾತಾಗಿದ್ದ ಮಹಾ ಭಾರತ ಧಾರವಾಹಿಯಲ್ಲಿ ಭೀಮನ ಪಾತ್ರ ಮಾಡಿದ್ದ ನಟ ಪ್ರವೀಣ್ ಕುಮಾರ್ ಸೋಬ್ಟಿ (74) ಇನ್ನಿಲ್ಲ. ಹೃದಯಾಘಾತದಿಂದ ಅವರು ಕೊನೆಯುಸಿರು ಎಳೆದಿದ್ದಾರೆ.
ನವದೆಹಲಿಯ ಅಶೋಕ್ ವಿಹಾರ್ ದಲ್ಲಿರುವ ತಮ್ಮ ನಿವಾಸದಲ್ಲಿ ಅವರು ನಿಧನಹೊಂದಿದ್ದಾರೆ.
ಪ್ರವೀಣ್ ಕುಮಾರ್ ಅವರು ಅಥ್ಲೀಟ್ ಆಗಿ ಕೂಡ ಗಮನ ಸೆಳೆದಿದ್ದರು. ಏಷ್ಯಾ ಕ್ರೀಡಾಕೂಟದಲ್ಲಿ ಅವರು ಚಿನ್ನದ ಪದಕ ಪಡೆದಿದ್ದರು. 1966 ಮತ್ತು 1970ರಲ್ಲಿ ನಡೆದ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು.