ತಾಜಾ ಸುದ್ದಿಗಳುರಾಜ್ಯ
ಹಿಜಾಬ್ ಕುರಿತು ಹೈಕೋರ್ಟ್ ವಿಚಾರಣೆ : ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ
ಬೆಂಗಳೂರು : ಕರ್ನಾಟಕ ಹೈಕೋರ್ಟ್ ನಲ್ಲಿ ಹಿಜಾಬ್ ಕುರಿತಾಗಿನ ಚರ್ಚೆ ಇಂದು ಪ್ರಾರಂಭವಾಗಿದ್ದು, ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳೀಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.
ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಕುರಿತು ಮುಖ್ಯ ನ್ಯಾಯಮೂರ್ತಿಗಳು ನಿರ್ಧರಿಸಲಿ ಎಂದು ನ್ಯಾಯಮೂರ್ತಿ ಎ ಎಸ್ ದೀಕ್ಷಿತ್ ಅಭಿಪ್ರಾಯಿಸಿದ್ದಾರೆ.
ನಿನ್ನೆ ಇಡೀ ದಿನ ವಾದ ವಿವಾದ ಆಲಿಸಿದ್ದ ನ್ಯಾಯಮೂರ್ತಿ ಎ ಎಸ್ ದೀಕ್ಷಿತ್ ಎರಡು ಕಡೆಯ ವಾದ ಆಲಿಸಿದ್ದರು. ಮುಂದಿನ ವಿಚಾರಣೆಯನ್ನು ಇಂದಿಗೆ ಮುಂದೂಡಿದ್ದರು.
ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಮತ್ತು ತಮ್ಮ ಧಾರ್ಮಿಕ ಆಚರಣೆಗಳನ್ನು ಪಾಲಿಸುವ ವಿಚಾರದಲ್ಲಿ ಕಾಲೇಜು ಆಡಳಿತ ಮಂಡಳಿ ಮಧ್ಯಪ್ರವೇಶಿಸದಂತೆ ನಿರ್ದೇಶಿಸಬೇಕು ಎಂದು ಕೋರಿ ವಿದ್ಯಾರ್ಥಿನಿಯೊಬ್ಬಳು ಹೈಕೋರ್ಟ್ ಗೆ ಕಳೆದ ವಾರ ರಿಟ್ ಸಲ್ಲಿಸಿದ್ದರು.