ರಾಜ್ಯ
ಪರಿಸರ ಪ್ರೇಮಿ, ಜಾನಪದ ಕಲಾವಿದ ಮಾದೇವ ವೇಳಿಪ ಇನ್ನಿಲ್ಲ

ಕಾರವಾರ: ಖ್ಯಾತ ಪರಿಸರ ಪ್ರೇಮಿ ಹಾಗೂ ಜಾನಪದ ಕಲಾವಿದ ಮಾದೇವ ವೇಳಿಪ (90) ಇನ್ನಿಲ್ಲ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರು ಎಳೆದಿದ್ದಾರೆ.
ಪರಿಸರ ಪ್ರೇಮಿಯಾಗಿ ಗುರುತಿಸಿಕೊಂಡಿದ್ದ ಮಾದೇವ ವೇಳಿಪ ಕೊಡುಗೆ ಪರಿಗಣಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಹಲವು ಸಂಘ ಸಂಸ್ಥೆಗಳು ಅವರನ್ನು ಗೌರವಿಸಿದ್ದವು.
ಜೋಯಿಡಾ ತಾಲೂಕಿನ ನಾಗೋಡಾ ಗ್ರಾಮದ ಕಾರ್ಟೋಳಿ ಎಂಬಲ್ಲಿ ವಾಸವಾಗಿದ್ದ ಮಾದೇವ ವೇಳಿಪ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.