ಮಣಿಪಾಲ : ಉಚಿತ ಅರೋಗ್ಯ ತಪಾಸಣಾ ಶಿಬಿರ ಮತ್ತು ಕೋವಿಡ್ ಲಸಿಕಾ ಅಭಿಯಾನ

ಉಡುಪಿ : ಪ್ರತಿಯೊಬ್ಬ ನಾಗರಿಕನ ಅರೋಗ್ಯ ಮಟ್ಟ ಉತ್ತಮವಾಗಿದ್ದಾಗ ಮಾತ್ರ ಆತ ತನ್ನ ದೈನಂದಿನ ಕೆಲಸಗಳನ್ನು ಸಾಮಾನ್ಯವಾಗಿ ನೀರ‍್ವಹಿಸಬಲ್ಲ, ಹಾಗೆಯೆ ಸಾಮಾಜಿಕವಾಗಿ ಕೂಡ ಚಿಂತಿಸ ಬಲ್ಲ, ಸರ‍್ವಜನಿಕ ವಲಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತಿ ಹೊಂದ ಬೇಕಾದರೆ ಅರೋಗ್ಯ ಶಿಬಿರಗಳ ಆಯೋಜನೆ ಅತ್ಯವಶ್ಯಕ ಇದರಿಂದ ಸ್ವಸ್ಥ ಸಮಾಜ ನರ‍್ಮಾಣ ಸಾಧ್ಯ ಎಂದು ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಅಭಿಮತ ವ್ಯಕ್ತಪಡಿಸಿದರು.
ಮಂಗಳವಾರ ಮಣಿಪಾಲ ಆರ್ ಎಸ್ ಬಿ ಸಭಾಭವನದಲ್ಲಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರ‍್ವೇಕ್ಷಣಾ ಘಟಕ, ನಗರ ಪ್ರಾಥಮಿಕ ಅರೋಗ್ಯ ಕೇಂದ್ರ ಮಣಿಪಾಲ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಆರ್ ಎಸ್ ಬಿ ಸಂಘ ಮಣಿಪಾಲ, ರೋಟರಿ ಕ್ಲಬ್ ಉಡುಪಿ ರಾಯಲ್, ಇವರೆಲ್ಲರ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಉಚಿತ ಅರೋಗ್ಯ ತಪಾಸಣಾ ಶಿಬಿರ ಮತ್ತು ಕೋವಿಡ್ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಮಾತನಾಡಿ ಕೇಂದ್ರ ಹಾಗು ರಾಜ್ಯ ಸರಕಾರಗಳಿಂದ ಅರೋಗ್ಯ ಸಂಬಂಧಿ ಯೋಜನೆಗಳು ಅನುಷ್ಠಾನ ಗೊಂಡು ಚಾಲನೆಯಲ್ಲಿದ್ದು ಅವುಗಳ ಮಾಹಿತಿ ಹಂಚಿಕೆಯನ್ನು ಅರೋಗ್ಯ ಶಿಬಿರಗಳ ಮೂಲಕ ಸಂಘಟನೆಗಳು ಮಾಡ ಬೇಕು ಎಂದು ಕರೆ ನೀಡಿದರು.
ರಾಯಲ್ ಅಧ್ಯಕ್ಷ ತೇಜೇಶ್ವರ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ, ನಗರಸಭಾ ಸದಸ್ಯೆ ಕಲ್ಪನಾ ಸುಧಾಮ, ನಗರ ಪ್ರಾಥಮಿಕ ಅರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಚರ‍್ಮಿನ್, ಆರ್ ಎಸ್ ಬಿ ಸಂಘ ಇದರ ಉಪಾಧ್ಯಕ್ಷ ರಾಮಕೃಷ್ಣ ನಾಯಕ್, ಕರ‍್ಯರ‍್ಶಿ ಸುಮಿತ್ರಾ ನಾಯಕ್, ವ್ಯವಸ್ಥಾಪಕ ಗಿರೀಶ್, ಕೆಎಂಸಿ ಮಣಿಪಾಲ ಇದರ ವೈದ್ಯರಾದ ಡಾ.ಮೇಧಶ್ರೀ, ಡಾ. ಅನುಷಾ ಉಪಸ್ಥಿತರಿದ್ದರು.
ಎಂಐಟಿ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಮದ್ದೋಡಿ ವಂದಿಸಿ ರೋಯಲ್ ಸ್ಥಾಪಕ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ನಿರೂಪಿಸಿದರು. ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಕಾರ್ಯಕ್ರಮ ಸಂಯೋಜಿಸಿ ಸ್ವಾಗತಿಸಿದರು.