ತಾಜಾ ಸುದ್ದಿಗಳುರಾಜ್ಯ

ಸುಬ್ರಹ್ಮಣ್ಯ : ಹವ್ಯಾಸಿ ಯಕ್ಷಗಾನ ಭಾಗವತ ರಾಮಚಂದ್ರ ಅರ್ಬಿತ್ತಾಯ ಅಪಘಾತಕ್ಕೆ ಬಲಿ

ಕಡಬ : ಸುಬ್ರಮಣ್ಯದ ಹವ್ಯಾಸಿ ಯಕ್ಷಗಾನ ಭಾಗವತರಾದ ರಾಮಚಂದ್ರ ಅರ್ಬಿತ್ತಾಯ ಅವರು ರಸ್ತೆ ಅಪಘಾತದಲ್ಲಿ ಇಂದು ಮುಂಜಾನೆ ನಿಧನರಾದರು.

ಹವ್ಯಾಸಿ ಭಾಗವತರು ಆಗಿದ್ದ ಅವರು ಕುಮಾರಸ್ವಾಮಿ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು.

ಇಂದು ಮುಂಜಾನೆ ಸುಮಾರು 5.45ರ ಹೊತ್ತಿಗೆ ರಾಮಚಂದ್ರ ಅರ್ಬಿತ್ತಾಯರು ತಮ್ಮ ಸಹೋದರ ರವಿ ಅರ್ಬಿತ್ತಾಯರೊಂದಿಗೆ ಕುಲ್ಕುಂದಕ್ಕೆ ಶಟಲ್ ಬ್ಯಾಡ್ಮಿಂಟನ್ ಆಟ ಆಡಲು ತೆರಳುತ್ತಿರುವ ಸಂದರ್ಭ ಕುಲ್ಕುಂದದ ಬ್ರಾಮರಿ ನೆಸ್ಟ್ ವಸತಿಗೃಹದ ಬಳಿ ಅವರು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಪಕ್ಕದ ಗುಡ್ಡ ದಿಂದ ಕಡವೆ ಹಾರಿತು. ಪರಿಣಾಮವಾಗಿ ಅರ್ಬಿತ್ತಾಯರ ಕುತ್ತಿಗೆಯ ಭಾಗಕ್ಕೆ ಬಲವಾದ ಏಟು ಬಿದ್ದು ಬೈಕ್ ಪಲ್ಟಿಯಾಯಿತು. ರಾಮಚಂದ್ರರು ಸ್ಥಳದಲ್ಲೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ರಾಮಚಂದ್ರ ಅರ್ಬಿತ್ತಾಯರು ಸುಮಾರು 16 ವರ್ಷಗಳಿಂದ ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ನ ಆಶ್ರಯದಲ್ಲಿರುವ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಕಛೇರಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಸುಮಾರು 53 ವರ್ಷ ಪ್ರಾಯವಾಗಿರುವ ಇವರು ಅವಿವಾಹಿತರಾಗಿದ್ದು, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ವೃತ್ತಿಯಲ್ಲಿ ಶಾಲಾ ಗುಮಾಸ್ತರಾಗಿದ್ದರೂ ಪ್ರವೃತ್ತಿಯಲ್ಲಿ ಕೀ ಬೋರ್ಡ್ ವಾದಕರಾಗಿ, ಭಾಗವತರಾಗಿ ಹೆಸರು ಪಡೆದಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!