ಕರಾವಳಿ
ಸೋಮವಾರದಿಂದ ಶಿಕ್ಷಣ ಸಂಸ್ಥೆಗಳು ಆರಂಭ; ಉಡುಪಿ ಡಿಸಿ ಕೂರ್ಮರಾವ್ ಆದೇಶ!

ಉಡುಪಿಯಲ್ಲಿ ಆರಂಭವಾದ ಹಿಜಬ್ ಕೇಸರಿ ಕಿಚ್ಚಿನಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದ ಉಡುಪಿ ಡಿಸಿ ಕೂರ್ಮರಾವ್ ಇದೀಗ ಆದೇಶ ಹೊರಡಿಸಿದ್ದು, ಸೋಮವಾರದಿಂದ ಶಿಕ್ಷಣ ಸಂಸ್ಥೆಗಳು ಆರಂಭ ಎಂದು ಘೋಷಣೆ ಮಾಡಲಾಗಿದೆ.
ಫೆ. 12 ರಿಂದ ಫೆಬ್ರವರಿ 19 ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಶಾಲೆಯ ಸುತ್ತಮುತ್ತ ಗುಂಪು ಸೇರುವಂತಿಲ್ಲ ಹಾಗೂ ಪ್ರತಿಭಟನೆ, ಮೆರವಣಿಗೆ ಪರ ಘೋಷಣೆ ಕೂಗುವಂತಿಲ್ಲ. ಇನ್ನು ಯಾವುದೇ ವ್ಯಕ್ತಿ, ಜಾತಿ ಧರ್ಮಕ್ಕೆ ನೈತಿಕತೆ ವಿರುದ್ಧ ನಡೆದುಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ.