ರಾಷ್ಟ್ರೀಯ
42 ಲಕ್ಷ ರೂಪಾಯಿ ವೆಚ್ಚದಲ್ಲಿ ಕೃಷ್ಣ ದೇವಸ್ಥಾನ ನಿರ್ಮಿಸಿದ ಮುಸ್ಲಿಂ ಉದ್ಯಮಿ

ರಾಂಚಿ: ಧರ್ಮ ಧರ್ಮದ ಮಧ್ಯೆ ಅನಗತ್ಯ ಪೈಪೋಟಿ ನಡೆಯುತ್ತಿರುವ ಈ ಹೊತ್ತಿನಲ್ಲಿ ಜಾರ್ಖಂಡ್ ನಲ್ಲಿ ಮುಸ್ಲಿಂ ಉದ್ಯಮಿಯೊಬ್ಬರು ಎಲ್ಲ ಧರ್ಮ ಒಂದೇ ಎಂಬ ಸಂದೇಶ ಸಾರಿದ್ದಾರೆ. ಸಹೋದರರ ಹಾಗೆ ಬಾಳಿ ಬದುಕಬೇಕಾದ ಬಗ್ಗೆ ಹಿತವಚನ ಹೇಳಿದ್ದಾರೆ.
ಜಾರ್ಖಂಡ್ ನ ದುಮ್ಕಾ ಜಿಲ್ಲೆಯ ಉದ್ಯಮಿ ನೌಷಾದ್ ಶೇಕ್ 42 ಲಕ್ಷ ರೂಪಾಯಿ ವೆಚ್ಚ ಮಾಡಿ ಕೃಷ್ಣ ದೇವಸ್ಥಾನ ನಿರ್ಮಿಸಿದ್ದಾರೆ. ಇದಕ್ಕೆ ಗ್ರಾಮಸ್ಥರು ಅವರನ್ನು ಅಭಿನಂದಿಸಿದ್ದಾರೆ.
ದುಮ್ಕಾ ಜಿಲ್ಲೆಯ ಮಹೇಶ್ ಬಥಾನಿ ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ. ಇದೀಗ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವ ನಡೆಸಲಾಗಿದೆ.
ಪಶ್ಚಿಮ ಬಂಗಾಳದ ಮಾಯಾಪುರಕ್ಕೆ ಭೇಟಿ ನೀಡಿದ್ದಾಗ ಅವರಿಗೆ ಕನಸಿನಲ್ಲಿ ಶ್ರೀಕೃಷ್ಣ ಕಾಣಿಸಿ ಕೊಂಡಿದ್ದರಂತೆ. ಇದರಿಂದ ಪ್ರೇರಣೆಗೊಂಡ ಉದ್ಯಮಿ ಇದೀಗ ದೇವಸ್ಥಾನ ನಿರ್ಮಿಸಿದ್ದಾರೆ.