ಮಹಿಳಾ ಪ್ರೊಫೆಸರ್ ನೇಣಿಗೆ ಶರಣು

ಬೆಂಗಳೂರು: ಜ್ಞಾನಜ್ಯೋತಿ ನಗರದ ಕದಂಬ ಲೇಔಟ್ ನಲ್ಲಿ ತನ್ನ ಮನೆಯಲ್ಲಿ ಮಹಿಳಾ ಪ್ರೊಫೆಸರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಚೈತ್ರ ಎಂದು ಗುರುತಿಸಲಾಗಿದೆ.
ಇವರು ಬಿಜಿಎಸ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಚೈತ್ರ ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟು, ಅದರಲ್ಲಿ “ನನ್ನ ಸಾವಿಗೆ ಯಾರು ಕಾರಣರಲ್ಲ, ನಾನು ಕಾಯಿಲೆಯಿಂದ ಬಳಲುತ್ತಿದ್ದೇನೆ. ಆದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ” ಎಂದು ಹೇಳಿದ್ದಾರೆ.
ಪತಿ ಗುರುಪ್ರಸಾದ್ ಚೈತ್ರಾಗೆ ಕಾಲ್ ಮಾಡಿದಾಗ ರಿಸೀವ್ ಮಾಡಿರಲಿಲ್ಲ. ಕೂಡಲೇ ಗುರುಪ್ರಸಾದ್ ಚೈತ್ರ ಸಹೋದರನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅವರು ಮನೆಗೆ ಆಗಮಿಸಿ ಮನೆಯ ಬಾಗಿಲು ಮುರಿದು ನೋಡುವಷ್ಟರಲ್ಲಿ ಚೈತ್ರ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡೆತ್ ನೋಟನ್ನು ವಶಕ್ಕೆ ಪಡೆಯಲಾಗಿದೆ.