ರಾಷ್ಟ್ರೀಯ
ರಾಜಸ್ಥಾನ: ನದಿಗೆ ಉರುಳಿದ ಕಾರು; ಮದುಮಗ ಸೇರಿ 9 ಮಂದಿ ಸಾವು

ಕೋಟಾ(ರಾಜಸ್ಥಾನ): ನಿಯಂತ್ರಣ ತಪ್ಪಿದ ಕಾರೊಂದು ಇಲ್ಲಿನ ಚಂಬಲ್ ನದಿಗೆ ಉರುಳಿದ ಪರಿಣಾಮ ಮದುಮಗ ಸೇರಿ. 9 ಮಂದಿ ಜಲಸಮಾಧಿಯಾಗಿದ್ದಾರೆ.
ರಾಜಸ್ಥಾನದ ಕೋಟಾ ಬಳಿ ಭಾನುವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ.
ಎಲ್ಲ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ದುರಂತಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಕಾರು ಉಜ್ಜೈನಿ ಕಡೆಗೆ ಸಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿ ಮದುಮಗ ಸೇರಿ 9 ಮಂದಿ ಪ್ರಯಾಣಿಸುತ್ತಿದ್ದರು. ಎಲ್ಲರೂ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.