ಕರಾವಳಿ

ಶಾಂತಿನಗರ ; ಸಾಲದ ಚಿಂತೆಯಿಂದ ಮನನೊಂದ ಮಹಿಳೆ ನೇಣಿಗೆ ಶರಣು.!

ಮಣಿಪಾಲ: ಸಾಲದ ಚಿಂತೆಯಿಂದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲ 80ನೇ ಬಡಗಬೆಟ್ಟು ಗ್ರಾಮದ ಶಾಂತಿ ನಗರದಲ್ಲಿ ನಡೆದಿದೆ.

ಬಡಗಬೆಟ್ಟು ಗ್ರಾಮದ ಶಾಂತಿ ನಗರದ ಒಂದನೇ ಅಡ್ಡರಸ್ತೆಯ ನಿವಾಸಿ 33 ವರ್ಷದ ಬಸಮ್ಮ ಸದರಗಟ್ಟಿ ನೇಣಿಗೆ ಶರಣಾದ ಮಹಿಳೆ. ಇವರು ಸುಮಾರು 3 ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಆದರೆ ಇತ್ತೀಚೆಗೆ ಮನೆ ಸಾಲದ ವಿಚಾರದಲ್ಲಿ ಗಂಡನ ಬಳಿ ಆಗಾಗ ಜಗಳ ಮಾಡುತ್ತಿದ್ದರು. ಬಸಮ್ಮನವರು ಸಾಲದ ಚಿಂತೆಯಿಂದ ಅಥವಾ ಇನ್ಯಾವುದೋ ಹೇಳಿಕೊಳ್ಳಲಾಗದ ಕಾರಣದಿಂದ ಮನನೊಂದು ಫೆ.19ರಂದು ಮನೆಯಲ್ಲಿ ಕೋಣೆಯಲ್ಲಿನ ಫ್ಯಾನ್‌ಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!