ಕರಾವಳಿ
ಉಡುಪಿ: ಕಿದಿಯೂರಿನ ಯುವತಿ ನಾಪತ್ತೆ

ಮಲ್ಪೆ : ಕಿದಿಯೂರಿನ ಮನೆಯಿಂದ ಮಣಿಪಾಲಕ್ಕೆ ಹೋದ ಏಕತಾ ವರ್ಮಾ ಅವರು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಏಕತಾ ವರ್ಮಾ(23) ಅವರು ಕಾಲೇಜು ಶಿಕ್ಷಣ ಮುಗಿಸಿ ಮನೆಯಲ್ಲಿಯೇ ಇದ್ದು, ನಿನ್ನೆ ಮಧ್ಯಾಹ್ನ ಕಿದಿಯೂರಿನ ಮನೆಯಿಂದ ಮಣಿಪಾಲದಲ್ಲಿರುವ ಸಹೋದರನ ಕ್ಯಾಂಟೀನ್ ಗೆಂದು ತೆರಳಿದ್ದರು. ಆದರೆ ಅವರು ಮಣಿಪಾಲಕ್ಕೆ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ.ಇವರ ಬಗ್ಗೆ ಎಲ್ಲಾ ಕಡೆ ವಿಚಾರಿಸಿದರೂ ಎಲ್ಲಿಯೂ ಪತ್ತೆಯಾಗಿರುವುದಿಲ್ಲ ಎಂದು ಏಕತಾ ಅವರ ತಂದೆ ನೀಡಿದ ದೂರಿನಂತೆ ಮಲ್ಪೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.