ಕರಾವಳಿ

ಬ್ರಹ್ಮಾವರ: ಮನೆ ಕಳ್ಳತನ ಪ್ರಕರಣ – ಒಂದೇ ದಿನದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

ಉಡುಪಿ : ದಿನಾಂಕ 01-04 -2022ರಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಬ್ರಹ್ಮಾವರ ಚೇರ್ಕಾಡಿ ಗ್ರಾಮದ ಕನ್ನಾರು ಎಂಬಲ್ಲಿ ವಾಸುಪೂಜಾರಿ ರವರ ಮನೆಯಲ್ಲಿ ಅವರ ಹೆಂಡತಿ   ಪ್ರೇಮ ಮನೆಯಲ್ಲಿ ಒಂಟಿಯಾಗಿದ್ದು ಮನೆಯ ಹೊರಗಡೆ ಪಾತ್ರೆ ತೊಳೆಯುವಾಗ ಮನೆ ಹಿಂಬದಿ

ಬಾಗಿಲ ಚಿಲಕ ಮುರಿದು ಒಳ ಪ್ರವೇಶಿಸಿ
ಮನೆಯನ್ನು ಜಾಲಾಡಿ ಸುಮಾರು 10ಗ್ರಾಂ
ತೂಕದ ಚಿನ್ನದ ನೆಕ್ಲೆಸ ಅನ್ನು ಕಳವು
ಮಾಡಿಕೊಂಡು ಹೋಗುವುದನ್ನು ಪ್ರೇಮರವರು
ನೋಡಿ ತನ್ನ ಗಂಡನಿಗೆ ತಿಳಿಸಿ ಅದರಂತೆ
ಬ್ರಹ್ಮಾವರ ಠಾಣೆಯಲ್ಲಿ ಹಗಲು ಕನ್ನ ಕಳವು
ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬೆನ್ನು ಬಿದ್ದ ಪೊಲೀಸರು ಬ್ರಹ್ಮಾವರ
ಪೊಲೀಸ್‌ ವೃತ್ತ ನಿರೀಕ್ಷಕರಾದ ಶ್ರೀ ಅನಂತ
ಪದ್ಮನಾಭ ರವರ ಮಾರ್ಗದರ್ಶನದಂತೆ
ಪಿಎಸ್.ಐ.ಶ್ರೀ ಗುರುನಾಥಬಿಹಾದಿಮನಿ
ಹಾಗೂ ಪಿ.ಎಸ್.ಐ ಶ್ರೀಮತಿ ಮುಕ್ತಾಬಾಯಿ
ರವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು
ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು
ಯಾವುದೇ ತಾಂತ್ರಿಕ ಸಹಾಯವಿಲ್ಲದೆ ಕೇವಲ ಪೊಲೀಸ್‌ ಸಂಪ್ರದಾಯಿಕ ವಿಧಾನದಲ್ಲಿ
ಸಾರ್ವಜನಿಕರಿಂದ ತಳಮಟ್ಟದ ಮಾಹಿತಿ
ಸಂಗ್ರಹಿಸಿ ಆರೋಪಿಯು ಕಳವು ಮಾಡಿದ
ದಿವಸ ಧರಿಸಿದ ಬಟ್ಟೆಯ ಜಾಡನ್ನು ಹಿಡಿದು
ಕೊನೆಗೂ ಆರೋಪಿಯನ್ನು ಪತ್ತೆ ಮಾಡಿ
50,000/- ರೂ ಬೆಲೆಬಾಳುವ ಚಿನ್ನದ ನೆಕ್ಸಸ್ ನ್ನು
ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಪ್ರಕರಣ
ದಾಖಲಾಗಿ 24 ಗಂಟೆಯೊಳಗೆ ಪ್ರಕರಣ
ಭೇಧಿಸಿದಂತಾಗಿದೆ.

ಆರೋಪಿತನ ಹೆಸರು ಸುರೇಶ್ @ ಸೂರ್ಯ @
ಕಪಿ, ಪ್ರಾಯ 31 ವರ್ಷ, ತಂದೆ: ಮಾರುತಿ, ವಾಸ:
ಮೋಹನ್ ಕುಮಾರ್ ನಗರ, ಯಶವಂತಪುರ.
ಬೆಂಗಳೂರು ಆಗಿದ್ದು ಈತನು ಮೂಲತಃ
ಪೆಜಮಂಗೂರು ಗ್ರಾಮ ಪ್ರಗತಿ ನಗರ ,
ಬ್ರಹ್ಮಾವರ ತಾಲೂಕು ನವನಾಗಿರುತ್ತಾನೆ
.ಈತನು ಕಾರ್ಕಳ ಗ್ರಾಮಾಂತರ ಪೊಲೀಸ್
ಠಾಣೆಯಲ್ಲಿ ಎರಡು ಕಳ್ಳತನದ ಪ್ರಕರಣದ
ಆರೋಪಿಯಾಗಿದ್ದು , ತಾಮ್ರ , ಚಿನ್ನದ ಕಿವಿಯೋಲೆ ,ಉಂಗುರ ಕಳವು ಮಾಡಿರುತ್ತಾನೆ .

ಆರೋಪಿಯು ಕಾನೂನು ಸಂಘರ್ಷಗೊಳಲಾದ
ಬಾಲಕನಾಗಿ 07 ವರ್ಷ ರಿಮ್ಯಾಂಡ್ ಹೋಮ್
ನಲ್ಲಿ ಶಿಕ್ಷೆ ಅನುಭವಿಸಿರುವುದು ತನಿಖೆಯಲ್ಲಿ
ಕಂಡುಬಂದಿರುತ್ತದೆ. ಪ್ರಸ್ತುತ ಆರೋಪಿತನು
ಬೆಂಗಳೂರಿನ ಬಿ.ಬಿ.ಎಂ.ಪಿ.ಯಲ್ಲಿ ಕಸ ಗುಡಿಸುವ
ಕೆಲಸ ಮಾಡಿಕೊಂಡಿರುತ್ತಾನೆ.

ಬ್ರಹ್ಮಾವರ ಪೊಲೀಸ್ ಠಾಣಾ ಮೇಲಿನ
ಪ್ರಕರಣದಲ್ಲಿ ಉಡುಪಿ ಜಿಲ್ಲಾ ಮಾನ್ಯ ಪೊಲೀಸ್
ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ ಐಪಿಎಸ್,
ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್
ಅಧೀಕ್ಷಕರಾದ ಶ್ರೀ ಸಿದ್ದಲಿಂಗಪ್ಪ ಕೆ.ಎಸ್.ಪಿ.ಎಸ್
ರವರ ಮಾರ್ಗದರ್ಶನದಂತೆ ಶ್ರೀ ಸುಧಾಕರ
ನಾಯ್ಕ, ಪೊಲೀಸ್ ಉಪಾಧೀಕ್ಷಕರು, ಉಡುಪಿ
ಉಪವಿಭಾಗರವರ ಹಾಗೂ ಅನಂತ ಪದ್ಮನಾಭ,
ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರ ರವರ
ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಬ್ರಹ್ಮಾವರ ಪೊಲೀಸ್
ಉಪನಿರೀಕ್ಷಕರಾದ ಗುರುನಾಥ ಬಿ ಹಾದಿಮನಿ
ಹಾಗೂ ತನಿಖೆ ಪಿ.ಎಸ್.ಐ ಮುಕ್ತಾಬಾಯಿ
ಹಾಗೂ ಪ್ರೊಬೆಷನರಿ ಪಿ.ಎಸ್.ಐ. ಸುಬ್ರಹ್ಮಣ್ಯ
ದೇವಾಡಿಗ ಹಾಗೂ ಸಿಬ್ಬಂದಿಗಳಾದ
ವೆಂಕಟರಮಣ ದೇವಾಡಿಗ, ಪ್ರವೀಣ್ ಶೆಟ್ಟಿಗಾರ್
ರಾಘವೇಂದ್ರ ಕಾರ್ಕಡ , ದಿಲೀಪ್ ಕುಮಾರ್,
ಅಸ್ಮಿಲ್ ಮತ್ತು ಚಾಲಕ ಅಣ್ಣಪ್ಪ ಇವರ
ಕಾರ್ಯವನ್ನು ಶ್ಲಾಘಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!