ಅಂತಾರಾಷ್ಟ್ರೀಯತಾಜಾ ಸುದ್ದಿಗಳು
ರಷ್ಯಾ ಯುದ್ಧ ಘೋಷಣೆ: ಬಾಂಬೆ ಷೇರು ಮಾರುಕಟ್ಟೆ ಭಾರಿ ಕುಸಿತ
ಮುಂಬೈ: ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅನುಮತಿ ನೀಡಿರುವಂತೆಯೇ ಬಾಂಬೆ ಷೇರು ಮಾರುಕಟ್ಟೆ ಕಂಪಿಸಿದೆ.
ವಹಿವಾಟು ಆರಂಭವಾದ ಕೂಡಲೇ ಷೇರು ಮಾರುಕಟ್ಟೆಯಲ್ಲಿ 1428 ಅಂಕಗಳ ಕುಸಿತ ದಾಖಲಿಸಿದೆ. ಇದು ವಹಿವಾಟು ಆರಂಭವಾದ ಕೂಡಲೇ ಕಂಡ ಕುಸಿತವಾಗಿದೆ.
ಸೇನಾ ಕಾರ್ಯಾಚರಣೆ ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪ ಪಡೆದರೆ ಅದು ಭಾರತದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ತೈಲ ಪೂರೈಕೆ ಏರು ಪೇರಾಗಲಿದೆ. ತೈಲ ದರ ಹೆಚ್ಚಾಗಲಿದೆ